ಮಡಿಕೇರಿ, ಆ. ೧೩: ದಿ. ಕೊಡಗಿನ ಗೌರಮ್ಮನ ಕುಟುಂಬಸ್ಥರು ಹಾಗೂ ಹವ್ಯಕ ಮಹಾ ಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಹವ್ಯಕ ಮಹಿಳೆಯರಿಗಾಗಿ ಆಯೋಜಿಸಿರುವ ಸಣ್ಣ ಕಥಾಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಎಲ್ಲಾ ವಯೋಮಾನದ ಹವ್ಯಕ ಮಹಿಳೆಯರು, ಯಾವುದೇ ಸೀಮೆಯ ಹವ್ಯಕ ಭಾಷೆಯಲ್ಲಿ ಕಥೆ ಬರೆಯಬಹುದು, ಈವರೆಗೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ವಿಜೇತೆಯರಿಗೆ ಅವಕಾಶ ಇರುವುದಿಲ್ಲ.

ಈವರೆಗೆ ಎಲ್ಲೂ ಪ್ರಕಟವಾಗದ, ಭಾಷಾಂತರವಲ್ಲದ ಸಾಮಾಜಿಕ ಕಥೆಯನ್ನು ಎಂಟು ಪುಟಕ್ಕೆ ಮೀರದೆ, ಕಾಗದದ ಒಂದು ಬದಿಗೆ ಸ್ಪುಟವಾಗಿ, ಟೈಪ್ ಮಾಡಿದ್ದಾದರೆ ಎರಡು ಸಾವಿರ ಪದಗಳು ಮೀರದಂತೆ ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು.

ಆಸಕ್ತರು ತಾ.೩೦ರೊಳಗೆ ವಿಜಯಾಸುಬ್ರಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಪೋಸ್ಟ್, ಕುಂಬಳೆ -೬೭೧೩೨೧, ಕಾಸರಗೋಡು ಜಿಲ್ಲೆ. ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ೮೫೪೭೨೧೪೧೨೫, ೬೨೩೮೫೩೭೨೬೭ ಸಂಖ್ಯೆ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ