ಕಡಂಗ, ಆ. ೧೩: ಕಡಂಗ ಗ್ರಾಮದ ಯುವಕರು ಸೇರಿ ವಾಟ್ಸ್ಆ್ಯಪ್ ಗ್ರೂಪ್ ಮುಖಾಂತರ ಹಲವಾರು ರೋಗಿಗಳಿಗೆ ನೆರವಾಗುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ಗ್ರೂಪ್ ಮುಖಾಂತರ ಬಡವರಿಗೆ, ರೋಗಿಗಳಿಗೆ ಸಹಾಯ ಹಸ್ತದ ನೆರವನ್ನು ಚಾಚಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಕಡಂಗ ಗ್ರಾಮದ ಪೈಸಾರಿ ಸುರಿ ಎಂಬ ಯುವಕ ಬೈಕ್ ನಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದು ಹಾಗೂ ಶೇಖರ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ತೆರಳಲು ಸಹಾಯ ಹಸ್ತವಾಗಿ ಸುರಿಗೆ ೨೦ ಸಾವಿರ ಹಾಗೂ ಶೇಖರಿಗೆ ೫ ಸಾವಿರ ರೂಪಾಯಿಯನ್ನು ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್ ಹಾಗೂ ಕಡಂಗ ಸಿಟಿ ಗ್ರೂಪ್ ನ ಅಡ್ಮಿನ್ ಅಬೂಬಕ್ಕರ್, ಝಕರಿಯಾ ರೋಗಿಯ ಮನೆಗೆ ತೆರಳಿ ಹಣವನ್ನು ನೀಡಿ ಮಾದರಿಯಾಗಿದ್ದಾರೆ.