ಮಡಿಕೇರಿ, ಆ. ೧೩: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆಯಿತು.
೨೦೨೧-೨೨, ೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಸಲಾಯಿತು. ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್ ಪ್ರಾಸ್ತಾವಿಕ ನುಡಿಯಲ್ಲಿ ೫ ವರ್ಷದ ಕಾಲಾವಧಿಯಲ್ಲಿ ಸರ್ವ ಸದಸ್ಯರ ಪ್ರಯತ್ನದ ಫಲವಾಗಿ ಸಂಘದ ಹೆಸರಿಗೆ ನಿವೇಶನವನ್ನು ಕಾಯ್ದಿರಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ರಾಜ್ಯ ಸಂಘದ ಹೋರಾಟದ ಫಲವಾಗಿ ೭ನೇ ವೇತನ ಆಯೋಗ ಜಾರಿಯಾದ ಬಗೆ, ಕ್ರೀಡಾಕೂಟ ಆಯೋಜನೆ, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಅಭಿನಂದನಾ ಸಮಾರಂಭವನ್ನು ತಾ. ೧೭ ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡ ವಿಷಯಗಳನ್ನು ಅವರು ತಿಳಿಸಿದರು.
ಡಾ. ಎಸ್. ಸಿದ್ದರಾಮಣ್ಣ ರಾಜ್ಯ ಖಜಾಂಚಿ ಕ.ರಾ.ಸ.ನೌ. ಸಂಘ ಬೆಂಗಳೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ರಾಜ್ಯ ಸಂಘ ಬೆಳೆದು ಬಂದ ಹಾದಿ, ೭ನೇ ವೇತನ ಆಯೋಗದ ರೂಪುರೇಷೆಗಳ ಬಗ್ಗೆ ತಿಳಿಸಿದರು. ೨೦೩ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ, ೯೦ ಕ್ಕಿಂತ ಹೆಚ್ಚು ಅಂಕಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಸೋಮವಾರಪೇಟೆಯ ತಾಲೂಕು ಅಧ್ಯಕ್ಷ ಪ್ರದೀಪ್, ವೀರಾಜಪೇಟೆಯ ತಾಲೂಕು ಅಧ್ಯಕ್ಷ ಗುರುರಾಜ್, ಪೇರಿಯನ ಜಯಾ ನಂದ. ಅಧ್ಯಕ್ಷರು ಕೊಡಗು ಗೌಡ ಸಮಾಜ ಮಡಿಕೇರಿ, ಸಿ.ಟಿ. ಸೋಮ ಶೇಖರ್ ಜಿಲ್ಲಾ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ, ಸದಾಶಿವ ಪಲ್ಲೆದ್, ಜಿಲ್ಲಾ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ನಂಜುAಡಯ್ಯ ಜಿಲ್ಲಾ ಶಸ್ತç ಚಿಕಿತ್ಸಕರು, ವೈದ್ಯ ದಂಪತಿಗಳಾದ ಡಾ. ನವೀನ್ ಮತ್ತು ಡಾ. ರಾಜೇಶ್ವರಿ, ರೋಹಿಣಿ ಆರೋಗ್ಯ ಇಲಾಖೆ, ರಾಜೇಶ್ ಜಿಲ್ಲಾಧ್ಯಕ್ಷರು ಆರೋಗ್ಯ ಇಲಾಖೆ, ಬಾಬು ಜಿಲ್ಲಾ ಅಧ್ಯಕ್ಷರು ವಾಹನ ಚಾಲಕರ ಸಂಘ, ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಿತ್ರಾವತಿ ಬಿ.ಐ. ಪ್ರಾರ್ಥಿಸಿ, ಗುರುರಾಜ್ ಸ್ವಾಗತಿಸಿದರು. ಪ್ರದೀಪ್ ವಂದಿಸಿದರು. ಪ್ರೌಢಶಾಲಾ ಶಿಕ್ಷಕಿ ಅನಿತಾ ನಿರ್ವಹಿಸಿದರು.