ಮಡಿಕೇರಿ, ಆ. ೧೩: ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಅಶ್ವಥಕಟ್ಟೆ(ನಾಗನ ಸ್ಥಾನ)ಯ ಹತ್ತಿರ ಹಿಂದಿನ ಸಾಲಿನ ಭಕ್ತಜನ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ಭತ್ತದ ಗದ್ದೆಯಲ್ಲಿ ಹಾಲಿ ಭಕ್ತಜನ ಸಂಘದ ವತಿಯಿಂದ ನಾಟಿ ಮಾಡಲಾಯಿತು.

ಈ ಸಂದರ್ಭ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷ ಕಲಿಯಾಟಂಡ ರಾಜ ಅಪ್ಪಣ್ಣ, ಕಾರ್ಯದರ್ಶಿ ಬಟ್ಟೀರ ಚೋಂದಮ್ಮ ಮೇದಪ್ಪ, ಖಜಾಂಚಿ ಅಂಜಪರವAಡ ಕುಶಾಲಪ್ಪ, ನಿರ್ದೇಶಕರುಗಳಾದ ಅನ್ನಡಿಯಂಡ ದಿಲೀಪ್ ಕುಮಾರ್, ಪರದಂಡ ಸದಾ ನಾಣಯ್ಯ, ಅಲ್ಲಾರಂಡ ಸನ್ನು ಅಯ್ಯಪ್ಪ, ಕೇಲೇಟಿರ ರಂಜನ್ ಅಪ್ಪಚ್ಚು, ಅಪ್ಪಾರಂಡ ಮಂದಣ್ಣ, ಕುಲ್ಲೇಟಿರ ಬೇಬಾ ಅರುಣ್, ಕುಟ್ಟಂಜೆಟ್ಟಿರ ಶ್ಯಾಮ್ ಬೋಪಣ್ಣ, ಕಾಂಡAಡ ಸಜನ್ ಪೂವಯ್ಯ, ಕಲಿಯಂಡ ಗಣೇಶ್, ಅರ್ಚಕರಾದ ಶ್ರೀಕಾಂತ್ ಹೆಬ್ಬಾರ್, ಕಚೇರಿ ಸಿಬ್ಬಂದಿಗಳಾದ ಕಂಬೆಯAಡ ಬೊಳ್ಳಪ್ಪ, ಕಂಬೆಯAಡ ಗಣೇಶ್, ಪೊಂಗೇರ ಶಂಭು ಇದ್ದರು.

ಭತ್ತದ ನಾಟಿ ಕಾರ್ಯಕ್ಕೆ ಮುನ್ನ ವಿಶೇಷ ಪ್ರಾರ್ಥನೆ ನೆರವೇರಿತು. ‘ಪುತ್ತರಿ’ ಹಬ್ಬದ ದಿನ ಸಂಪ್ರದಾಯದAತೆ ಇಗ್ಗುತ್ತಪ್ಪ ದೇವರಿಗೆ ಮೊದಲು ಕದಿರು ಒಪ್ಪಿಸುವ ‘ದೇವಪೊವ್ದ್’ನ ಪದ್ಧತಿಗಾಗಿ ದೇವಸ್ಥಾನದ ಹೊರಭಾಗದಲ್ಲಿರುವ ಗದ್ದೆಯಿಂದ ಈ ಹಿಂದಿನAತೆಯೇ ಕದಿರು ಕೊಯ್ದು ತರಲಾಗುವುದು.

‘ದೇವಪೊವ್ದ್’ ಕಳೆದು ಅಲ್ಪಸಮಯದ ಅಂತರದಲ್ಲಿಯೇ ನಾಡಿನೆಲ್ಲೆಡೆ ಸಂಭ್ರಮದಿAದ ಆಚರಿಸಲಾಗುವ ಪುತ್ತರಿಯ ಭಾಗವಾದ ‘ನಾಡ್‌ಪೊವ್ದ್’ನ್ನು ಆಯಾಯ ಕುಟುಂಬದ ಗದ್ದೆಯಿಂದ ಕದಿರು ತೆಗೆದು ಅವರವರ ಐನ್‌ಮನೆಯಲ್ಲಿ ಆಚರಿಸುವ ಕೊಡಗಿನ ಸಮಸ್ತ ಜನತೆ ಒತ್ತುನೀಡಬೇಕೆಂದು ಈ ಸಂದರ್ಭ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.