ಕೂಡಿಗೆ, ಆ. ೧೩: ಹಾರಂಗಿ ಅಣೆಕಟ್ಟೆಯ ಸಮೀಪದಲ್ಲಿರುವ ಸಾಕಾನೆ ಶಿಬಿರದಲ್ಲಿ ಆನೆ ದಿನಾಚರಣೆ ಪ್ರಯುಕ್ತ ಸಾಕಾನೆಗಳಿಗೆ ಇಲಾಖೆಯ ವತಿಯಿಂದ ಸಂಪ್ರದಾಯದAತೆ ಪೂಜೆ ನೆರವೇರಿಸಲಾಯಿತು.

ಕುಶಾಲನಗರ ವಲಯ ಅರಣ್ಯಾ ಧಿಕಾರಿ ರತನ್ ಕುಮಾರ್ ಅವರ ನಿರ್ದೇಶನದಂತೆ ಉಪ ವಲಯ ಅರಣ್ಯ ಅಧಿಕಾರಿ ಹೆಚ್.ಬಿ. ಉಮೇಶ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗದವರು ೬ ಸಾಕಾನೆಗಳನ್ನು ಸ್ನಾನ ಮಾಡಿಸಿ ಬಣ್ಣ ಹೂವಿನಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಅರಣ್ಯ ಪಾಲಕ ಟಿ.ಕೆ. ದಿನೇಶ್, ಮಾವುತರು, ಕಾವಾಡಿಗರು, ಆರ್.ಆರ್.ಟಿ. ಸಿಬ್ಬಂದಿಗಳು, ಬೊಳ್ಳೂರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷೆ ಕೌಶಲ್ಯ ಸೇರಿದಂತೆ ಸಮಿತಿ ಸದಸ್ಯರು, ಪ್ರಾಣಿ ಪ್ರಿಯರಾದ ಎಂ. ಕಿರಣ್, ಸಾಕಾನೆಗಳಿಗೆ ಬಾಳೆ ಹಣ್ಣು, ಬೆಲ್ಲ, ಕಬ್ಬು, ಕಲ್ಲಂಗಡಿ ಹಣ್ಣುಗಳನ್ನು ನೀಡಿದರು.