ವಕ್ಫ್ ಮಸೂದೆ: ಜೆಪಿಸಿ ಸಮಿತಿ ಮುಖ್ಯಸ್ಥರಾಗಿ ಜಗದಾಂಬಿಕ ಪಾಲ್
ನವದೆಹಲಿ, ಆ. ೧೩: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುವ ಸಂಸತ್ತಿನ ಜಂಟಿ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸಂಸದ ಜಗದಾಂಬಿಕಾ ಪಾಲ್ ಅವರನ್ನು ನೇಮಿಸಲಾಗಿದೆ. ೩೧ ಸದಸ್ಯರ ಸಮಿತಿಯ ಮುಖ್ಯಸ್ಥರಾಗಿ ಜಗದಾಂಬಿಕಾ ಪಾಲ್ ಅವರನ್ನು ಸ್ಪೀಕರ್ ಓಂ ಬಿರ್ಲಾ ನೇಮಕ ಮಾಡಿದ್ದಾರೆ ಎಂದು ಲೋಕಸಭೆಯ ಅಧಿಸೂಚನೆ ತಿಳಿಸಿದೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳು ಅದರ ನಿಬಂಧನೆಗಳ ವಿರುದ್ಧ ಪ್ರತಿಭಟನೆಯ ನಡುವೆ, ಸರ್ಕಾರವು ಮಸೂದೆಯನ್ನು ಎರಡೂ ಸದನಗಳ ಜಂಟಿ ಸಮಿತಿಗೆ ಕಳುಹಿಸಲು ನಿರ್ಧರಿಸಿದೆ. ಲೋಕಸಭೆಯಿಂದ ೨೧ ಮತ್ತು ರಾಜ್ಯಸಭೆಯಿಂದ ೧೦ ಸದಸ್ಯರು ಜೆಪಿಸಿಯಲ್ಲಿ ಇರಲಿದ್ದು ಮುಂದಿನ ಅಧಿವೇಶನದ ವೇಳೆಗೆ ತನ್ನ ವರದಿಯನ್ನು ಸಲ್ಲಿಸಲಿದೆ. ೭೩ ವರ್ಷದ ಪಾಲ್ ಉತ್ತರ ಪ್ರದೇಶದಿಂದ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಪಕ್ಷಗಳೊಂದಿಗೆ ಜಗದಾಂಬಿಕಾ ಪಾಲ್ ಉತ್ತ ಸೌಹಾರ್ದ ಸಂಬAಧ ಹೊಂದಿದ್ದಾರೆ. ಸಂಸದೀಯ ವ್ಯವಹಾರಗಳ ಖಾತೆಯನ್ನು ಹೊಂದಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಮಿತಿಯ ಭಾಗವಾಗಲು ಸದಸ್ಯರನ್ನು ಹೆಸರಿಸುವ ಪ್ರಸ್ತಾವನೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಕಳೆದ ಶುಕ್ರವಾರ ಅಂಗೀಕರಿಸಿತು. ಲೋಕಸಭೆಯಲ್ಲಿ ಸಮಿತಿಯ ೧೨ ಸದಸ್ಯರು ಆಡಳಿತಾರೂಢ ರಾಷ್ಟಿçÃಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ಇದ್ದಾರೆ. ಇದರಲ್ಲಿ ಬಿಜೆಪಿಯ ಎಂಟು ಮತ್ತು ವಿರೋಧ ಪಕ್ಷದ ಒಂಬತ್ತು ಸದಸ್ಯರು ಸೇರಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್, ಕವಿತಾಗೆ ನ್ಯಾಯಾಂಗ ಬಂಧನ
ನವದೆಹಲಿ, ಆ. ೧೩: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಆರ್ಎಸ್ ನಾಯಕಿ ಕೆ. ಕವಿತಾ ಮತ್ತು ಇತರರ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಮಂಗಳವಾರ ಸೆಪ್ಟೆಂಬರ್ ೨ ರವರೆಗೆ ವಿಸ್ತರಿಸಿದೆ. ಈ ಹಿಂದೆ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದರು. ಅಬಕಾರಿ ನೀತಿ ಹಗರಣಕ್ಕೆ ಸಂಬAಧಿಸಿದAತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ೫೫ ವರ್ಷದ ಕೇಜ್ರಿವಾಲ್ ಅವರನ್ನು ಜೂನ್ ೨೬ ರಂದು ತಿಹಾರ್ ಜೈಲಿನಿಂದ ಸಿಬಿಐ ಬಂಧಿಸಿತ್ತು. ಅಲ್ಲಿ ಅವರು ಜಾರಿ ನಿರ್ದೇಶನಾಲಯ ದಾಖಲಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಹಿಮಾಚಲದಲ್ಲಿ ಪ್ರವಾಹ: ರಾಷ್ಟಿçÃಯ ಹೆದ್ದಾರಿ ಸೇರಿದಂತೆ ೨೧೩ ರಸ್ತೆಗಳು ಬಂದ್
ಶಿಮ್ಲಾ, ಆ. ೧೩: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ ೨೧೩ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸ್ಥಳೀಯ ಹವಾಮಾನ ಕಚೇರಿಯು ಆಗಸ್ಟ್ ೧೯ ರವರೆಗೆ ರಾಜ್ಯದ ಅನೇಕ ಭಾಗಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಿಂದಾಗಿ, ಶಿಮ್ಲಾದಲ್ಲಿ ೮೯ ರಸ್ತೆಗಳನ್ನು ಬಂದ್ ಆಗಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ನಂತರ ಸಿರ್ಮೌರ್ನಲ್ಲಿ ೪೨, ಮಂಡಿಯಲ್ಲಿ ೩೭, ಕುಲುದಲ್ಲಿ ೨೬, ಕಂಗ್ರಾದಲ್ಲಿ ೬, ಚಂಬಾದಲ್ಲಿ ಐದು ಮತ್ತು ಕಿನ್ನೌರ್ ಹಾಗೂ ಲಾಹೌಲ್ ಮತ್ತು ಸ್ಪಿತಿಯಲ್ಲಿ ತಲಾ ನಾಲ್ಕು ರಸ್ತೆಗಳನ್ನು ಬಂದ್ ಆಗಿವೆ ಎಂದು ಹೇಳಿದೆ. ಸೋಮವಾರ ಸಂಜೆಯಿAದ, ನೈನಾ ದೇವಿಯಲ್ಲಿ ೯೬.೪ ಮಿಮೀ ಅತ್ಯಧಿಕ ಮಳೆ ದಾಖಲಾಗಿದೆ. ನಂತರ ಧರ್ಮಶಾಲಾ (೨೫ ಮಿಮೀ), ಕಂದಘಾಟ್ (೧೦.೪ ಮಿಮೀ) ಮತ್ತು ಕಾಹು(೯.೨ ಮಿಮೀ)ದಲ್ಲಿ ಭಾರಿ ಮಳೆಯಾಗಿದೆ. ಹಿಮಾಚಲದಲ್ಲಿ ಮಳೆ ಸಂಬAಧಿತ ಅವಘಡಗಳಲ್ಲಿ ೧೧೦ ಜನ ಸಾವನ್ನಪ್ಪಿದ್ದಾರೆ ಮತ್ತು ಜೂನ್ ೨೭ ರಿಂದ ಆಗಸ್ಟ್ ೧೨ ರವರೆಗೆ ರಾಜ್ಯದಲ್ಲಿ ಸುಮಾರು ೧,೦೦೪ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.