‘ವಾಟ್ಸಾö್ಯಪ್’ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬನ ಸಮಯವನ್ನು ಅತಿ ಹೆಚ್ಚು ಆಕ್ರಮಿಸಿಕೊಂಡಿರುವ ಮೊಬೈಲ್ನ ಈ ಪ್ರಮುಖ ಮೆಸೇಜಿಂಗ್ ಆಪ್ (ಂಠಿಠಿ)ನಲ್ಲಿ ಇತ್ತೀಚೆಗೆ ಇನ್ನೊಂದು ಉಪಯುಕ್ತ ಸೇರ್ಪಡೆ ‘ಮೆಟಾ ಎಐ’ (ಮೆಟಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್). ಇದೊಂದು ‘ವರ್ಚುವಲ್ ಅಸಿಸ್ಟೆಂಟ್’ ಎನ್ನಬಹುದು. ಅಂದರೆ ಭೌತಿಕವಾಗಿ ಗೋಚರಿಸದೆಯೇ ತನ್ನ ಇರುವಿಕೆಯನ್ನು ಸಾರುವ ಸಹಾಯಕನಂತೆ ಕಾರ್ಯ ನಿರ್ವಹಿಸುವ ಈ ‘ಮೆಟಾ ಎಐ’ ಉಪಯುಕ್ತ ಮಾಹಿತಿಗಳನ್ನು ಅತ್ಯಂತ ಶೀಘ್ರವಾಗಿ ತನ್ನ ಬಳಕೆದಾರರಿಗೆ ಒದಗಿಸಬಲ್ಲದು.
ಮೆಟಾ (ಈ ಹಿಂದೆ ಫೇಸ್ಬುಕ್) ಕಂಪನಿಯ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ೨೦೦೪ ರಲ್ಲಿ ಫೇಸ್ಬುಕ್ ಎಂಬ ಜನಪ್ರಿಯ ಆಪ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಕ್ರಾಂತಿ ಮೂಡಿಸಿದರು. ಇದರೊಂದಿಗೆ ಇನ್ಸ್ಟಾçಗ್ರಾಂ, ಥ್ರೆಡ್ಸ್ ಕೂಡಾ ಇವರ ಕೊಡುಗೆಗಳೇ. ವಾಟ್ಸಾö್ಯಪ್ ಇವರ ಕೊಡುಗೆಯಾಗದಿದ್ದರೂ ರೂ. ೧.೧೪ ಲಕ್ಷ ಕೋಟಿಗೆ ಅದನ್ನು ಖರೀದಿಸಿದರು. ‘ಮುಂಜಾನೆಯೆದ್ದು ಜನರನ್ನು ಸಂಪರ್ಕಿಸಲು ಮತ್ತು ಸಂಭಾಷಿಸಲು ಹಂಬಲಿಸುವ ಜನರ ನೆರವಿಗಾಗಿ ಈ ಕಂಪನಿಯ ಸ್ಥಾಪನೆಯಾಗಿದೆ’ ಎನ್ನುವ ಇವರ ಉದ್ದೇಶ ಜನರು ಅದೆಷ್ಟೇ ದೂರದಲ್ಲಿದ್ದರೂ ಪರಸ್ಪರ ಸಂತೋಷ ಸುಖ ದು:ಖಗಳನ್ನು ಹಂಚಿಕೊಳ್ಳಬೇಕೆAಬ ಸದುದ್ದೇಶದಿಂದ ಕೂಡಿದೆ. ಅದೇ ರೀತಿ ಹೊಸ ಪರಿಚಯ, ವ್ಯವಹಾರ ವಿಸ್ತರಣೆಗೂ ಈ ಸಾಮಾಜಿಕ ಮಾಧ್ಯಮ ಗಳು ಸಹಾಯ ಮಾಡುತ್ತವೆ. ಕೃತಕ ಬುದ್ಧಿಮತ್ತೆ ಚಾಲಿತ ಈ ಹೊಸ ಆ್ಯಪ್ ಪ್ರಪಂಚದ ಪ್ರಮುಖ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಹಾಯಕಗಳಲ್ಲಿ ಒಂದು. ಇದೀಗ ವಾಟ್ಸಾö್ಯಪ್, ಫೇಸ್ಬುಕ್, ಇನ್ಸ್ಟಾçಗ್ರಾಂ ಮೂಲಕ ಭಾರತಕ್ಕೂ ಲಗ್ಗೆ ಇಟ್ಟಿದೆ. ನಾವು ಬಳಸುತ್ತಿರುವ ಆ್ಯಪ್ಅನ್ನು ತೊರೆಯದೆಯೇ ವಿಷಯಗಳ ಕುರಿತಾದ ಸಂದೇಹಗಳ ನಿವಾರಣೆಗೆ ಇದು ಬಹಳ ಸಲೀಸಾಗಿ ಪರಿಹಾರ ನೀಡಬಲ್ಲದು. ಮಾತÀÈ ಸಂಸ್ಥೆಯಾದ ಸಾಮಾಜಿಕ ಮಾಧ್ಯಮದ ದೈತ್ಯ ಮೆಟಾ ಸ್ವಾಮ್ಯದ ಐಟಚಿmಚಿ-೩ ಮೂಲಕ ‘ಮೆಟಾ ಎಐ’ ಕಾರ್ಯ ನಿರ್ವಹಿಸುತ್ತದೆ. ಮಾನವ ಸಹಜ ಪ್ರತಿಕ್ರಿಯೆಗಳನ್ನು, ಸಲಹೆ ಸೂಚನೆಗಳನ್ನು ನೀಡುವ ಲಾಮಾ ೩ ಚಾಲಿತ ‘ಮೆಟಾ ಎಐ’ ಸ್ಪಂದಿಸುವ ವೇಗ ಅಚ್ಚರಿ ಮೂಡಿಸುತ್ತದೆ.
ಇದು ಎಲ್ಲಿದೆ ? : ವಾಟ್ಸಾö್ಯಪ್ನ್ನು ನೀವು ತೆರೆದಾಗ ಬಲ ಬದಿಯ ಕೆಳಭಾಗದಲ್ಲಿ ನಿಮಗೆ ಆಕಾಶ ನೀಲಿ, ನೇರಳೆ, ಗುಲಾಬಿ ಬಣ್ಣಗಳಿಂದ ಕೂಡಿದ ಒಂದು ಉಂಗುರದ ಆಕಾರ ಕಾಣುತ್ತದೆ. ಈ ವÀÀÈತ್ತಾಕಾರದ ಐಕಾನ್ ಮೇಲೆ ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ. ಆಗ ‘ಮೆಟಾ ಎಐ’ ನ ಐಟಚಿmಚಿ ೩ ಓಪನ್ ಆಗುತ್ತದೆ. ಅದರ ಬಳಕೆಯ ನಿಯಮಗಳನ್ನು ಓದಿ ಅಂಗೀಕರಿಸಿದ ಬಳಿಕ ‘ಂsಞ ಒeಣಚಿ ಂI ಚಿಟಿಥಿಣhiಟಿg’ ಎಂಬ ಬರಹ ಕಾಣುತ್ತದೆ. ಅಲ್ಲಿಯೇ ಕೆಳಗಿರುವ ಛಿoಟಿಣiಟಿue (ಮುಂದುವರಿ) ಸಂದೇಶವನ್ನು ಒತ್ತಿದಾಗ ಈ ‘ಮೆಟಾ ಎಐ’ ವಾಟ್ಸಾö್ಯಪ್ ಲಿಸ್ಟ್ನಲ್ಲಿ ಸೇರಿಕೊಂಡು ನಿಮ್ಮ ಸೇವೆಗೆ ಸಿದ್ಧವಾಗುತ್ತದೆ. ನಿಮಗೇನು ಬೇಕೆಂಬ ಹಲವಾರು ವಿಷಯಗಳೂ ಅಲ್ಲೇ ಕೆಳಗೆ ನಮೂದಿಸಲಾಗಿರುತ್ತದೆ. ಇದಕ್ಕೂ ಭಿನ್ನವಾಗಿ ನೀವು ಯಾವುದೇ ತರಹದ ಪ್ರಶ್ನೆಯನ್ನು ಮುಂದಿಟ್ಟರೂ ಕಣ್ಣು ಮುಚ್ಚಿ ತೆರೆಯುವುದರ ಒಳಗಾಗಿ ಉತ್ತರ ನಿಮ್ಮ ಮುಂದಿರುತ್ತದೆ. ಒಂದು ವೇಳೆ ನಿಮಗೆ ನಿಮ್ಮ ಮೊಬೈಲ್ನಲ್ಲಿರುವ ವಾಟ್ಸಾö್ಯಪ್ನಲ್ಲಿ ಈ ಉಂಗುರ ಕಾಣಿಸದಿದ್ದರೆ ನೀವು ಪ್ಲೇಸ್ಟೋರ್ನಲ್ಲಿ ವಾಟ್ಸಾö್ಯಪ್ ಅಪ್ಡೇಟ್ ಮಾಡಿದಾಗ ‘ಮೆಟಾ ಎಐ’ನ ಬಣ್ಣದ ಉಂಗುರ ಬೆರಗು ಮೂಡಿಸಲು ಬಂದಿರುತ್ತದೆ.
ಇದರ ಉಪಯೋಗಗಳೇನು: ನೀವು ಬಳಸುತ್ತಿರುವ ಆಪ್ನಿಂದ ಹೊರಗೆ ಹೋಗದೆಯೇ ನಿಮಗೆ ಬೇಕಾದ ಮಾಹಿತಿ, ಚಿತ್ರಗಳು, ವೀಡಿಯೋಗಳು ಹೀಗೆ ಪ್ರತಿಯೊಂದನ್ನೂ ನೀವು ಪಡೆದು ಜ್ಞಾನÀವನ್ನು ಹೆಚ್ಚಿಸಿಕೊಳ್ಳಬಹುದು. ಅಡುಗೆ, ವಿಜ್ಞಾನ, ಶೈಕ್ಷಣಿಕ, ವೈದ್ಯಕೀಯ, ಆರೋಗ್ಯ, ಸಾಮಾನ್ಯ ಜ್ಞಾನ, ಕಲೆ, ಹಾಡು, ನಾಟಕ, ಕಾದಂಬರಿ, ರಾಜಕೀಯ, ಇತಿಹಾಸ, ಪತ್ರ ರಚನೆ, ಪ್ರಬಂಧ, ಕ್ರೀಡೆ, ಮನರಂಜನೆ, ಒಂದೇ, ಎರಡೇ ಜೊತೆಗೆ ನಿಮ್ಮ ಕಲ್ಪನಾ ಲೋಕದ ಚಿತ್ರಗಳನ್ನೂ ಇದು ನಿಮಗೆ ಕ್ಷಣಮಾತ್ರದಲ್ಲಿ ಮೂಡಿಸಿಕೊಡುತ್ತದೆ. ಮೇಲ್ ಬರೆಯಲು, ವಾಕ್ಯವನ್ನು ಸರಿಪಡಿಸಲು, ಔಪಚಾರಿಕ ಸಂವಹನ ನಡೆಸಲು, ಗುಂಪು ಸಂಭಾಷಣೆ ನಡೆಸಲು, ವೈವಿಧ್ಯ ಪೂರ್ಣ ಆಮಂತ್ರಣ ಪತ್ರಗಳ ರಚನೆಗೆ ಒಟ್ಟಿನಲ್ಲಿ ನಿಮ್ಮ ಕ್ರಿಯಾಶೀಲತೆಗೆ ಕೈ ಜೋಡಿಸುವ ಕೆಲಸವನ್ನೂ ಮಾಡುವ ‘ಮೆಟಾ ಎಐ’, ನಮ್ಮ ಮೂಡ್ ಅನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ ಪರಮಾಪ್ತ ಗೆಳೆಯನಂತೆ ಭಾಸವಾಗುತ್ತದೆ. ನೀವೇನಾದರೂ ಬಂಧು ಬಾಂಧವರೊAದಿಗೆ, ಗೆಳೆಯರ ಬಳಗದೊಂದಿಗೆ ರಜಾ ದಿನಗಳನ್ನು ಅನುಭವಿಸುವ ಮನಸಿದ್ದರೆ ನಿಮ್ಮ ಯೋಜನೆಯ ಆಯೋಜನೆಗೂ ಇದು ನೆರವಾಗಬಲ್ಲದು. ಸ್ಥಳದ ಕಲ್ಪನೆಯಿಂದ ಹಿಡಿದು ನೀವು ಸವಿಯಬಹುದಾದ ಆಹಾರ-ವಿಹಾರ ಎಲ್ಲದಕ್ಕೂ ಆತ್ಮೀಯನಂತೆ ಸಲಹೆ ಸೂಚಿಸ ಬಲ್ಲದು. ನೀವು ಬಳಸುತ್ತಿರುವ ಆ್ಯಪ್ ಅನ್ನು ಬಿಟ್ಟು ಗೂಗಲ್ಗೆ ತೆರಳಿ ಹುಡುಕಾಡುವ ಕೆಲಸವನ್ನು ಇದು ಸುಲಭಗೊಳಿಸುತ್ತಿದೆ. ನಿಮ್ಮ ಸಂದೇಹಗಳನ್ನು ಟೈಪ್ ಮಾಡಿಯೇ ಕೇಳಬೇಕೆಂದೇನೂ ಇಲ್ಲ. ಧ್ವನಿ ಗ್ರಹಿಕೆಯ ತಂತ್ರಜ್ಞಾನವನ್ನು ಅಳವಡಿಸಿ ಕೊಂಡಿರುವ ಇದರಲ್ಲಿ ಧ್ವನಿ ಸಂದೇಶದ ಮೂಲಕವೂ ನಿಮ್ಮ ಸಂವಾದವನ್ನು ಮುಂದುವರಿಸಬಹುದು.
ಒAದು ವೇಳೆ ಬಲು ದೊಡ್ಡ ಪ್ಯಾರಾಗ್ರಾಫನ್ನು ನಿಮಗೆ ಓದಿ ಅರ್ಥೈಸಿ ಕೊಳ್ಳಲು ಸಮಯ ಇಲ್ಲದೇ ಹೋದಲ್ಲಿ ‘ಮೆಟಾ ಎಐ’ ಗೆ ಒಪ್ಪಿಸಿ ಸಾರಾಂಶ ಕೇಳಿ. ಬೇಸರಿಸದೆ ಕೆಲವೇ ಸೆಕೆಂಡುಗಳಲ್ಲಿ ಸಂಕ್ಷಿಪ್ತ ಸಾರಾಂಶವನ್ನು ನಿಮ್ಮ ಮುಂದಿಡುತ್ತದೆ. ಅಷ್ಟೇಕೆ ಗಣಿತದ ಸಮಸ್ಯೆಗೂ ಅದು ನಿಖರ ಉತ್ತರ ನೀಡಬಲ್ಲದು. ಇದು ಅನುವಾದ ಮತ್ತು ಮಾತಿನ ಗ್ರಹಿಕೆಯಲ್ಲೂ ಪರಿಣತಿ ಹೊಂದಿದ್ದು ಅಂದಾಜು ೧೦೦ ಭಾಷೆಗಳಿಗೆ ಇದರ ಸೌಲಭ್ಯ ಸಿಗುತ್ತಿದೆ. ಇನ್ಮುಂದೆ ಯಾವುದೇ ಬಳಕೆದಾರ ಎಲ್ಲಿಗೇ ಹೋಗಲಿ ಅರಿವಿಲ್ಲದ ಭಾಷೆಯ ಜನರೊಂದಿಗೆ ಸಂಭಾಷಣೆ ಸಲೀಸಾಗಲಿದೆ ಮತ್ತು ಭಾಷೆಯ ಅಡ್ಡಗೋಡೆ ಆಚೆ ಸರಿಯಲಿದೆ.
ಗುಂಪು ಸಂಭಾಷಣೆ: ‘ಮೆಟಾ ಎಐ’ನ್ನು ಗುಂಪಿನಲ್ಲಿ ಮಾಡುವ ಸಂಭಾಷಣೆಗೂ ಪೂರಕವಾಗಿ ಬಳಸಿಕೊಳ್ಳಬಹುದು. ಅದಕ್ಕಾಗಿ ಇಚ್ಚಿಸುವ ಗ್ರೂಪ್ ಚಾಟ್ನ್ನು ತೆರೆದ ಬಳಿಕ @ ಎಂದು ಟೈಪ್ ಮಾಡಿದ ಮೇಲೆ ಡ್ರಾಪ್ ಡೌನ್ ಮೆನುವಿನಿಂದ ‘ಮೆಟಾ ಎಐ’ ಆಯ್ಕೆ ಮಾಡಿ. ನಿಮ್ಮ ಪ್ರಶ್ನೆ-ಸಂದೇಶ-ಸೂಚನೆಗಳನ್ನು ಟೈಪ್ ಮಾಡಿ ಕಳಿಸಿ. ಶರವೇಗದಲ್ಲಿ ‘ಮೆಟಾ ಎಐ’ನಿಂದ ಬರುವ ಉತ್ತರಗಳು ಗುಂಪಿನ ಎಲ್ಲರಿಗೂ ಗೋಚರಿಸು ತ್ತದೆ. ‘ಮೆಟಾ ಎಐ’ನ ಪ್ರತಿಕ್ರಿಯೆಯ ಮೇಲೆ ಬಲಕ್ಕೆ ಸ್ವೆöÊಪ್ ಮಾಡಿ ಕೂಡಾ ನಿಮ್ಮ ಪ್ರತ್ಯುತ್ತರವನ್ನು ಕಳುಹಿಸ ಬಹುದಾಗಿದೆ. ‘ಮೆಟಾ ಎಐ’ ಮೇಲೆ ಒತ್ತಿದಾಗ ನಮಗೆ ಬಲಬದಿಯ ಮೇಲ್ಭಾಗದಲ್ಲಿ ೩ ಚುಕ್ಕೆಗಳು ಕಾಣುತ್ತವೆ. ಈ ಚುಕ್ಕೆಗಳ ಮೇಲೆ ಒತ್ತಿದಾಗ ಅಲ್ಲಿ ನಾವು ಹುಡುಕಿ ತೆಗೆದ ಮಾಹಿತಿಗಳನ್ನು ನಕಲು ಮಾಡುವ, ಬೇರೆಯವರಿಗೆ ಕಳುಹಿಸುವ ಅಥವಾ ಎಲ್ಲವನ್ನೂ ಅಳಿಸುವ ಸೌಲಭ್ಯಗಳೂ ಇಲ್ಲಿವೆ. ಎಲ್ಲಾ ವೈಯಕ್ತಿಕ ಸಂದೇಶಗಳು ಮತ್ತು ಕರೆಗಳು ‘ಎಂಡ್ ಟು ಎಂಡ್ ಎನ್ಕ್ರಿಪ್ಟ್’ ಆಗಿರುತ್ತೆ ಅಂದರೆ ಗೌಪ್ಯವಾಗಿರುತ್ತೆ ಅಂತ ಮೆಟಾ ಸಂಸ್ಥೆ ಹೇಳುತ್ತದೆ. ಮೆಟಾ ಆಗಲೀ ಅಥವಾ ವಾಟ್ಸಾö್ಯಪ್ ಆಗಲೀ ಅವನ್ನು ವೀಕ್ಷಿಸಲು ಅಥವಾ ಕೇಳಲು ಅಸಾಧ್ಯ ಎನ್ನುವ ಆಶ್ವಾಸನೆ ಅವರದ್ದು. ಈ ‘ಮೆಟಾ ಎಐ’ ತಂತ್ರಾAಶವು ಮೊದಲೇ ಹೇಳಿರುವಂತೆ ಕೃತಕÀ ಬುದ್ಧಿಮತ್ತೆಯಿಂದ ಕೆಲಸ ಮಾಡುತ್ತಿದ್ದು ಎಲ್ಲಾ ಪ್ರಶ್ನೆಗಳಿಗೂ ಅರ್ಥೈಸಿ ಕೊಂಡAತೆ ಉತ್ತರಿಸುವುದೇನೋ ಸರಿ ಆದರೆ ಅದರಿಂದ ಅಭಾಸವಾಗದಂತೆ ಉತ್ತರದ ಸತ್ಯಾಸತ್ಯತೆಯನ್ನು ಮರು ಪರಿಶೀಲಿಸಿಕೊಳ್ಳುವುದು ನಮ್ಮ ಸುರಕ್ಷತೆಗೆÀ ಅಗತ್ಯ. ಒಟ್ಟಿನಲ್ಲಿ ೧೨ಕ್ಕೂ ಅಧಿಕ ದೇಶಗಳ ಜನರ ಮನ ಗೆದ್ದಿರುವ ‘ಮೆಟಾ ಎಐ’ ಕನ್ನಡದಲ್ಲೂ ನಿಖರವಾದ ಮಾಹಿತಿಗಳನ್ನು ಒದಗಿಸುವ ಪ್ರಯತ್ನದಲ್ಲಿದೆ. ಮಾನವ ಸಂವಹನದ ಕ್ರಾಂತಿಗೆ ಕಾರಣವಾದ ತಂತ್ರಜ್ಞಾನ ಕ್ಷೇತ್ರದ ನೂತನ ಆವಿಷ್ಕಾರಗಳು ನಮ್ಮ ದೈನಂದಿನ ಬದುಕಿಗೂ ಆಧುನಿಕತೆಯ ಸ್ಪರ್ಶ ನೀಡುತ್ತಾ ನಮ್ಮನ್ನು ಬುದ್ಧಿವಂತರನ್ನಾಗಿಸುತ್ತಿವೆ. ಇನ್ನೇಕೆ ತಡ ? ‘ಮೆಟಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಬಳಸಿ ‘ಇಂಟೆಲಿಜೆAಟ್’ ಆಗಿ.
-ಕೊಟ್ಟಕೇರಿಯನ ಲೀಲಾ ದಯಾನಂದ
ಉಪ ಮಂಡಲ ಅಭಿಯಂತರರು
ಬಿ.ಎಸ್.ಎನ್.ಎಲ್., ಮಡಿಕೇರಿ
ಮೊ: ೯೪೪೯೮೫೮೫೮೬