ಚೆಯ್ಯಂಡಾಣೆ, ಆ. ೧೩: ಕಾರು ಮತ್ತು ಆಟೋರಿಕ್ಷಾ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು - ಮೂರ್ನಾಡು ಮುಖ್ಯರಸ್ತೆಯ ಬೊಳಿಬಾಣೆ ಎಂಬಲ್ಲಿ ಸಂಭವಿಸಿದೆ.
ಕೊಟ್ಟಮುಡಿ ಕಡೆಯಿಂದ ಮೂರ್ನಾಡು ಕಡೆಗೆ ಹೊದವಾಡ ಆಜಾದ್ ನಗರದ ನಿವಾಸಿ ಬುರ್ಹಾನ್ ಎಂಬುವರು ಚಲಾಯಿಸುತ್ತಿದ್ದ ಟೊಯೋಟಾ ಕಾರು ಹಾಗೂ ಮೂರ್ನಾಡು ಕಡೆಯಿಂದ ಇದೇ ಮಾರ್ಗವಾಗಿ ನಾಪೋಕ್ಲುವಿಗೆ ಬರುತ್ತಿದ್ದ ಕೊಕೇರಿ
ಕಾರು - ಆಟೋರಿಕ್ಷಾ ನಡುವೆ ಅಪಘಾತ
(ಮೊದಲ ಪುಟದಿಂದ) ಗ್ರಾಮದ ಮಚ್ಚಂಡ ಶಂಭು ಎಂಬುವವರು ಚಲಾಯಿಸುತ್ತಿದ್ದ ಆಟೋರಿಕ್ಷಾ ನಡುವೆ ನಾಪೋಕ್ಲು - ಮೂರ್ನಾಡು ಮುಖ್ಯರಸ್ತೆಯ ಬೊಳಿಬಾಣೆ ಬಳಿಯ ರಸ್ತೆಯ ತಿರುವಿನಲ್ಲಿ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಆಟೋರಿಕ್ಷಾ ಜಖಂಗೊAಡಿದ್ದು ಕಾರಿನ ಮುಂಭಾಗ ಚಕ್ರ ಕಳಚಿ ಬಿದ್ದಿದೆ. ಅಪಘಾತದಿಂದ ಆಟೋಚಾಲಕ ಶಂಭು ಅವರ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ರಸ್ತೆಯಲ್ಲಿ ಹಲವಾರು ಅಪಘಾತಗಳು ನಡೆದು ಪ್ರಾಣಹಾನಿ ಸಂಭವಿಸಿದ್ದು ಸಂಬAಧಪಟ್ಟ ಇಲಾಖೆಯವರು ಕೂಡಲೇ ಕಾವೇರಿ ನದಿಗೆ ಹೊಂದಿಕೊAಡಿರುವ ಈ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.