ಮಡಿಕೇರಿ, ಆ. ೧೨: ಭಾರತ ಸೇವಾದಳ ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸೋಮವಾರಪೇಟೆ ತಾಲೂಕಿನ ಚೆನ್ನ ಬಸಪ್ಪ ಸಭಾಂಗಣದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ವಹಿಸಿ ಮಾತನಾಡಿ, ಸೇವಾದಳ ಸ್ಥಾಪಕ ಡಾ.ಹರಡೀಕರ್ ಅವರನ್ನು ಸ್ಮರಿಸಿದರು. ಮಹಾತ್ಮಾ ಗಾಂಧಿ ಅವರ ಶಿಸ್ತು, ಶ್ರದ್ಧಾ, ಸೇವಾ ಮನೋಭಾವವನ್ನು ಶಿಕ್ಷಕರು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ರಾಷ್ಟçಗೀತೆ, ಧ್ವಜಗೀತೆ, ಸೇವಾದಳದ ದೇಶಭಕ್ತಿ ಗೀತೆಗಳನ್ನು ಮತ್ತು ಪ್ರಾತ್ಯಕ್ಷಿಕೆ ಮಾಡುವ ಮುಖಾಂತರ ಶಿಕ್ಷಕರಿಗೆ ಅರಿವು ಮೂಡಿಸಲಾಯಿತು.
ಸೋಮವಾರಪೇಟೆ ಸೇವಾದಳ ಅದ್ಯಕ್ಷ ಗೋಪಾಲ್, ಮುಖ್ಯ ಅತಿಥಿಗಳಾಗಿ ತಾಲೂಕು ಸಮಿತಿ ಖಜಾಂಚಿ ಎ.ಎಸ್ ಮಲ್ಲೇಶ್ ಭಾಗವಹಿಸಿದ್ದರು. ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕಿ ಕವಿತಾ ಹಾಜರಿದ್ದರು.
ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ನಿರೂಪಣೆ ಮಾಡಿದರು. ಸಂಪನ್ಮೂಲ ವ್ಯಕ್ತಿ ಎ.ಎಸ್ ರಂಗಸ್ವಾಮಿ ಸ್ವಾಗತಿಸಿದರು. ಸೇವಾದಳದ ಕಾರ್ಯದರ್ಶಿ ಎಚ್.ಪಿ ಕರುಂಬಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಂದನಾರ್ಪಣೆಯನ್ನು ಜಿಲ್ಲಾ ಸಂಘಟಕರ ಗವಿ ಸಿದ್ದನಗೌಡ ಪಾಟೀಲ್ ನೆರವೇರಿಸಿದರು.