ಕೂಡಿಗೆ, ಆ. ೧೨: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೪-೨೯ನೇ ಸಾಲಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಎ.ಎನ್. ಮಂಜುನಾಥ್, ಉಪಾಧ್ಯಕ್ಷರಾಗಿ ಎ.ಆರ್. ಮೋಹನ್ ಆಯ್ಕೆ ಯಾದರು. ೧೩ ಮಂದಿ ನಿರ್ದೇಶಕರ ಪೈಕಿ ೯ ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ಜಿಲ್ಲಾ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಟಿ. ಬಿ. ಮೋಹನ್ ಕಾರ್ಯನಿರ್ವಹಿಸಿದರು.
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ನಿರ್ದೇಶಕ, ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ, ಕೆ.ಡಿ.ಪಿ.ಸದಸ್ಯ ಟಿ. ಬಿ.ಜಗದೀಶ್ ಮತ್ತಿತರರ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು.
ಈ ಸಂದರ್ಭ ಸಂಘದ ನಿರ್ದೇಶಕ ಬಿ.ಜೆ.ಶಿವಪ್ಪ, ಎ.ಪಿ. ರಂಗಸ್ವಾಮಿ, ಎ. ಆರ್. ಲೋಕೇಶ್, ಎ.ಎಚ್.ಶಿವಶಂಕರ್, ಸಿ.ಡಿ.ಸ್ವಾತಿ, ಜಯಮ್ಮ, ಡಿ.ಆರ್.ಪ್ರೇಮಕುಮಾರ್ ಮತ್ತಿತರರು ಇದ್ದರು.