ವೀರಾಜಪೇಟೆ, ಆ. ೧೨: ಹಿಂದೂಗಳು ವಿಶ್ವದ ಎಲ್ಲೆಡೆ ನೆಲೆಕಂಡುಕೊAಡಿದ್ದರೂ ಎಲ್ಲಿಯೂ ಇಂದಿನವರೆಗೂ ಯಾರಿಗೂ ಹಿಂಸೆ ನೀಡುವ ಕೃತ್ಯಕ್ಕೆ ಮುಂದಾಗಿಲ್ಲ. ಆದರೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ರಾಗಿರುವ ಹಿಂದೂಗಳಿಗೆ ಹಿಂಸೆ ನೀಡುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಎಚ್ಚರಿಕೆ ನೀಡಿದರು.

ಹಿಂದೂ ಹಿತ ರಕ್ಷಣಾ ಸಮಿತಿ ಕೊಡಗು ಜಿಲ್ಲೆ ವತಿಯಿಂದ ಕರೆ ನೀಡಿದ ಪ್ರತಿಭಟನೆ ಹಿನ್ನಲೆಯಲ್ಲಿ ವೀರಾಜಪೇಟೆ ನಗರದ ಗಡಿಯಾರ ಕಂಬದ ಬಳಿ ಬಾಂಗ್ಲಾ ದೇಶದಲ್ಲಿ ನಡೆದ ಹಿಂದೂಗಳ ನರಮೇಧ ಮತ್ತು ಹಿಂಸಾತ್ಮಕ ಕೃತ್ಯವನ್ನು ಖಂಡಿಸಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಸುಜಾ ಕುಶಾಲಪ್ಪ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಹಿಂದೂ ಪರ ಸಂಘಟನೆಗಳು ಖಂಡಿಸುತ್ತವೆ. ಭಾರತ ಸರ್ಕಾರವು ಬಾಂಗ್ಲಾ ದೇಶದಲ್ಲಿ ನೆಲೆಸಿರುವ ಹಿಂದೂಗಳ ಭದ್ರತೆಗೆ ಸಕಲ ಕ್ರಮ ಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು. ಪ್ರತಿಭಟನೆಯಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹ ಸಂಪರ್ಕ ಪ್ರಮುಖ್ ಪ್ರಿನ್ಸ್ ಗಣಪತಿ, ಜಿಲ್ಲಾ ಕಾರ್ಯವಾಹ ಕುಟ್ಟಂಡ ಮಿರನ್, ಸೇವಾ ಭಾರತಿ ಜಿಲ್ಲಾಧ್ಯಕ್ಷರಾದ ಪಿ.ಸಿ ಚಂದ್ರನ್, ಎ.ಬಿ.ವಿ.ಪಿ. ಜಿಲ್ಲಾ ಪ್ರಮುಖ್ ಅಂಬಿಕಾ ಉತ್ತಪ್ಪ, ಭಾರತೀಯ ಜನತಾ ಪಕ್ಷ ತಾಲೂಕು ಅಧ್ಯಕ್ಷ ಸುವೀನ್ ಗಣಪತಿ, ಪ್ರಮುಖರಾದ ಮಾಳೇಟಿರ ಶ್ರೀನಿವಾಸ್, ಬಿ.ಎಂ ಕುಮಾರ್, ಹೇಮಂತ್ ಬಿ.ವಿ. ಹಿಂದೂ ಸಂಘಟನೆಯ ಪ್ರಮುಖರಾದ ವಿವೇಕ್ ರೈ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಜಕ್ ಯೋಗೇಶ್, ಗಣೇಶ್ ಬಿಟ್ಟಂಗಾಲ ಮತ್ತು ಪುರಸಭೆಯ ಸದಸ್ಯರು, ಮತ್ತಿತರರು ಹಾಜರಿದ್ದರು.