ಮಡಿಕೇರಿ, ಆ.೧೨: ೬೬/೧೧ ಕೆವಿ ಶನಿವಾರಸಂತೆ ವಿದ್ಯುತ್ ವಿತರಣಾ ಕೇಂದ್ರದ ಎಫ್-೩ ಶನಿವಾರಸಂತೆ ಟೌನ್ ಫೀಡರ್ ಜೊತೆಯಲ್ಲಿ ಹಾದುಹೋಗಿರುವ ಎಫ್-೬ ಮಣಜೂರು ಫೀಡರ್‌ನ ಕೇಬಲ್ ದುರಸ್ತಿ ಕೆಲಸವಿರುವುದರಿಂದ ತಾ. ೧೩ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಎಫ್೬ ಮಣಜೂರು ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಶನಿವಾರಸಂತೆ, ಗುಡುಗಳಲೆ, ಮಾದ್ರೆ, ಕಾಜೂರು, ದೊಡ್ಡಕೊಳತ್ತೂರು, ಅಪ್ಪಶೆಟ್ಟಳ್ಳಿ, ಶೆಟ್ಟಿಗನಹಳ್ಳಿ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹಾಗೆಯೇ ೬೬/೧೧ಕೆವಿ ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೧ ಕೋಟೆ, ಎಫ್೫ ಜಿ.ಟಿ ರಸ್ತೆ ಹಾಗೂ ಎಫ್೧೨ ರಾಜಾಸೀಟ್ ಫೀಡರ್‌ಗಳ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ನಡೆಸಬೇಕಿರುವುದರಿಂದ ತಾ. ೧೩ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೦೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಮೈಸೂರು ರಸ್ತೆ, ಪುಟಾಣಿನಗರ, ದೇಚೂರು, ಜಯನಗರ, ಜಲಾಶಯ ಬಡಾವಣೆ, ಮಂಗಳಾದೇವಿನಗರ, ಮೂರ್ನಾಡು ರಸ್ತೆ, ಮಂಗಳೂರು ರಸ್ತೆ, ಹೊಸಬಡಾವಣೆ, ರಾಜಾಸೀಟ್, ಇಂದಿರಾನಗರ, ಮುಳಿಯ, ಡೈರಿಫಾರಂ, ಎಫ್‌ಎಂಸಿ, ವಿದ್ಯಾನಗರ, ಇಂಡಸ್ಟಿçಯಲ್ ಪ್ರದೇಶ, ಕೆಎಸ್‌ಆರ್‌ಟಿಸಿ ಬಸ್‌ಸ್ಟಾö್ಯಂಡ್, ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.