ಶನಿವಾರಸಂತೆ, ಆ. ೧೨: ಸಮೀಪದ ಕೊಡ್ಲಿಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಭಾನುವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಯಿತು.

ಶ್ರೀ ಗಣಪತಿ ದೇವಸ್ಥಾನದಲ್ಲಿ ಯೋಧ ಯು.ಸಿ.ಸಂದೇಶ್ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಿತು.

ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಉದ್ಘಾಟಿಸಿದ ಕರ್ನಾಟಕ ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ದಾವಣಗೆರೆ ಸತೀಶ್ ಮಾತನಾಡಿ, ಸನಾತನ ಹಿಂದೂ ಧರ್ಮದ ರಕ್ಷಣೆಗೆ ಇನ್ನೂ ಅಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಸಂಘಟಿತರಾಗಬೇಕು. ಅಖಂಡ ಭಾರತದ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ನಿವೃತ್ತ ಸೈನಿಕ ಕೆ.ಎಸ್.ದೇವರಾಜ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಧ ಯು.ಸಿ.ಸಂದೇಶ್, ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಸೋಮವಾರಪೇಟೆಯ ಸುಭಾಶ್ ತಿಮ್ಮಯ್ಯ, ಭೋಜೆಗೌಡ, ಮಾದಾಪುರ ಸುನೀಲ್, ವಿನು, ಕೊಡ್ಲಿಪೇಟೆಯ ಕೆ.ಟಿ.ಅನಿಲ್, ಅನುಜ್, ವೈಶಾಕ್, ಪ್ರದೀಪ್, ಗಿರೀಶ್, ದಯಾನಂದ್, ಶನಿವಾರಸಂತೆಯ ಸೋಮಶೇಖರ್ ಪೂಜಾರಿ, ಪುನೀತ್, ದಿನೇಶ್ ಉಪಸ್ಥಿತರಿದ್ದರು.