ಕುಶಾಲನಗರ, ಆ. ೧೧ : ೨೦೧೮-೧೯ ರಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ದುರಂತ ಈ ಬಾರಿ ಮತ್ತೆ ಮರುಕಳಿಸುವ ಸಾಧ್ಯತೆ ಬಹುತೇಕ ಕಡಿಮೆ ಎಂದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣ ನಿವೃತ್ತ ಉಪ ಮಹಾನಿರೀಕ್ಷಕ ಡಾ. ಹೆಚ್.ಎಸ್.ಎಂ. ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, ವೈಜ್ಞಾನಿಕ ದಾಖಲೆ ಸಹಿತ ಮಾಹಿತಿ ಒದಗಿಸಿದ್ದಾರೆ. ಸಮುದ್ರಗಳ ತಳ ಭಾಗದಲ್ಲಿ ಉಂಟಾಗುವ ಭೂಕಂಪನ ಹಿನ್ನೆಲೆಯಲ್ಲಿ ಈ ಹಿಂದೆ ವಿಶ್ವದ ಬಹುತೇಕ ಪ್ರದೇಶಗಳಲ್ಲಿ ಜಲ ದುರಂತಗಳು, ಬೆಟ್ಟ ಕುಸಿತಗಳು ನಡೆದಿರುವುದು ವೈಜ್ಞಾನಿಕ ಸಂಶೋಧನೆಯಿAದ ಖಚಿತಗೊಂಡಿದೆ. ನದಿ ತಟದ ಹಳ್ಳಗಳಲ್ಲಿ ಅತಿಕ್ರಮವಾಗಿ ಗ್ರಾಮ ನಿರ್ಮಾಣ ಕೂಡ ಹಲವೆಡೆ ದುರಂತಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಪ್ರದೇಶಗಳು ಅತಿಕ್ರಮವಾಗಿ ಒತ್ತುವರಿಯಾಗುವುದರೊಂದಿಗೆ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಒಂದೇ ಜಾಗದಲ್ಲಿ ಜನ ದಟ್ಟಣೆ ಅಧಿಕಗೊಂಡ ಸಂದರ್ಭ ಕೆಲವು ಪ್ರಾಕೃತಿಕ ವ್ಯತ್ಯಯಗಳು ಕಂಡುಬರುತ್ತವೆ ಎಂದು ಹೇಳಿದ್ದಾರೆ. ಕೇರಳದ ವೈನಾಡ್ ದುರಂತ ಪ್ರದೇಶದಲ್ಲಿ ಮೂರು ಶತಮಾನಗಳ ಹಿಂದೆ ಕೂಡ ಇದೇ ರೀತಿಯ ದುರಂತ ನಡೆದಿತ್ತು ಎಂಬ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ೧೦೪ ಪ್ರದೇಶಗಳನ್ನು ಸೂಕ್ಷö್ಮ ಪ್ರದೇಶಗಳೆಂದು ೧೦ ವರ್ಷಗಳ ಹಿಂದೆಯೇ ಗುರುತಿಸಲಾಗಿತ್ತು. ಭೂಕುಸಿತ ಮತ್ತು ಪ್ರವಾಹ ಎದುರಾಗುವುದರಿಂದ ಆ ಪ್ರದೇಶಗಳ ಕುಟುಂಬಗಳನ್ನು ಸ್ಥಳಾಂತರ ಮಾಡುವ ಬಗ್ಗೆ ವರದಿ ಸಲ್ಲಿಸಲಾಗಿತ್ತು.
ಭೂವಿಜ್ಞಾನಿಗಳು ಭೂಮಿಯ ಚಲನ ವಲನ ಸ್ಥಿತಿಗತಿಯ ಬಗ್ಗೆ ಗಮನಹರಿಸಿ ಸಂಬAಧಿಸಿದವರಿಗೆ ನೀಡುವ ವರದಿಯನ್ನು ತಕ್ಷಣ ಅನುಷ್ಠಾನಗೊಳಿಸಿದಲ್ಲಿ ಯಾವುದೇ ರೀತಿಯ ಆತಂಕಕಾರಿ ಪರಿಸ್ಥಿತಿ ಸೃಷ್ಟಿಯಾಗುವುದಿಲ್ಲ ಎಂದರು. ಪ್ರಸಕ್ತ ಪರಿಸ್ಥಿತಿಯಲ್ಲಿ ಹಳ್ಳಿಗಳು ಪಟ್ಟಣವಾಗುತ್ತಿವೆ. ನಗರಗಳಾಗಿ ಬದಲಾವಣೆಗೊಳ್ಳುತ್ತಿವೆ. ಈ ಸಂದರ್ಭ ಸುರಕ್ಷಿತ ಪ್ರದೇಶಗಳಲ್ಲಿ ಮಾತ್ರ ಬಡಾವಣೆಗಳ ನಿರ್ಮಾಣ ಆಗಬೇಕಾಗಿದೆ. ವಲಸಿಗರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ನೆಲೆಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದ್ದು ಇದು ಭಾರೀ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಜಪಾನ್ ದಕ್ಷಿಣ ಭಾಗದಲ್ಲಿ ಜ್ವಾಲಾಮುಖಿಗಳು ಹೊರ ಹೊಮ್ಮುವ ಮೂಲಕ ದ್ವೀಪಗಳು ನಾಶವಾಗುತ್ತಿದ್ದು, ಇದರ ಪರಿಣಾಮ ಹಲವೆಡೆ ಪ್ರಕೃತಿ ವಿಕೋಪಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ೨೦೧೮ ರಿಂದ ನಿರಂತರ ಮೂರು ವರ್ಷಗಳ ಕಾಲ ನಡೆದ ಪ್ರಕೃತಿ ವಿಕೋಪದ ಸಂದರ್ಭ ನದಿ ಜಲಮೂಲಗಳಲ್ಲಿ, ಜಲಾಶಯಗಳಲ್ಲಿ ಸಂಗ್ರಹವಾಗಿರುವ ಭೂ ಕುಸಿತದ ಮಣ್ಣು ಮತ್ತು ಇತರ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದು ಅಗತ್ಯ ಕೆಲಸವಾಗಿದೆ. ವೈಜ್ಞಾನಿಕವಾಗಿ ನಿರ್ವಹಣೆ ಕೆಲಸ ನಡೆಯದಿದ್ದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ಪ್ರಕಾಶ್ ಮಾಹಿತಿ ನೀಡಿದ್ದಾರೆ. -ಚಂದ್ರಮೋಹನ್