ಮಡಿಕೇರಿ, ಆ. ೧೧: ಭಾರತದಲ್ಲಿ ಏಲಕ್ಕಿ ಸಂಶೋಧನೆಯನ್ನು ಭಾರತೀಯ ಕೃಷಿ ಅನುಸಂದಾನ ಪರಿಷತ್ತು, ಸಂಬಾರ ಮಂಡಳಿ ಮತ್ತು ರಾಜ್ಯ ತೋಟಗಾರಿಕೆ/ಕೃಷಿ ವಿಶ್ವವಿದ್ಯಾಲಯಗಳು ನಡೆಸುತ್ತಿವೆ. ಭಾರತೀಯ ಕೃಷಿ ಅನುಸಂದಾನ ಪರಿಷತ್ತು ನವದೆಹಲಿ ಇದರ ಅಡಿಯಲ್ಲಿ ಕಲ್ಲಿಕೋಟೆಯ ಐಸಿಎಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಏಲಕ್ಕಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಏಕೈಕ ಸಂಸ್ಥೆಯಾಗಿದ್ದು, ಐಸಿಎಆರ್‌ನಿಂದ ಅಭಿವೃದ್ಧಿಪಡಿಸಿದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ೧೦೯ ನೂತನ ತಳಿಗಳನ್ನು ನವದೆಹಲಿಯಲ್ಲಿ ಇಂದು ರೈತ ಸಮುದಾಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮರ್ಪಿಸಿದರು. ಇದರಲ್ಲಿ ಅಪ್ಪಂಗಳದ ಐಸಿಎಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಇತ್ತೀಚೆಗೆ ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣದೊಂದಿಗೆ ಅಭಿವೃದ್ಧಿಪಡಿಸಿರುವ ಐಐಎಸ್‌ಆರ್ ಮನುಶ್ರೀ ಮತ್ತು ಐಐಎಸ್‌ಆರ್ ಕಾವೇರಿ ಎಂಬ ೨ ಏಲಕ್ಕಿ ತಳಿಗಳನ್ನು ಸೇರಿಸಲಾಗಿದೆ. ಈ ಎರಡು ತಳಿಗಳು ಇತ್ತೀಚೆಗೆ ಬೆಳೆ ಗುಣಮಟ್ಟ, ಅಧಿಸೂಚನೆ ಮತ್ತು ತೋಟಗಾರಿಕಾ ಬೆಳೆಗಳಿಗೆ ತಳಿಗಳ ಬಿಡುಗಡೆಯ ಕೇಂದ್ರ ಉಪ ಸಮಿತಿಯಿಂದ ಅಗತ್ಯವಾದ ನಿಯಂತ್ರಣ ಅನುಮೋದನೆಯನ್ನು ಪಡೆದಿವೆ.

ಐಐಎಸ್‌ಆರ್ ಮನುಶ್ರೀ ಮತ್ತು ಐಐಎಸ್‌ಆರ್ ಕಾವೇರಿ ತಳಿಗಳನ್ನು ಅಪ್ಪಂಗಳದ ಐಸಿಎಆರ್-ಐಐಎಸ್‌ಆರ್, ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್.ಜೆ. ಅಂಕೇಗೌಡ ಮತ್ತು ಅವರ ತಂಡ ಅಭಿವೃದ್ಧಿಪಡಿಸಿದೆ.

ಎರಡು ತಳಿಗಳು ಮಲಬಾರ್ ಪ್ರಭೇದಕ್ಕೆ ಸೇರಿದ್ದು, ಕೊತ್ತುಗಳು ನೆಲದ ಮೇಲೆ ಹರಡಿಕೊಂಡಿರುತ್ತವೆ ಹಾಗೂ ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣವನ್ನು ಹೊಂದಿವೆ. ಐಐಎಸ್‌ರ್ ಮನುಶ್ರೀ ತಳಿಯು ಸ್ಥಿರ ಇಳುವರಿಯನ್ನು ನೀಡುತ್ತದೆ ಮತ್ತು ೫೫೦ ರಿಂದ ೩೬೦ ಕೆಜಿ / ಹೆಕ್ಟೇರ್ ಸರಾಸರಿ ಒಣ ಇಳುವರಿಯನ್ನು ನೀಡುತ್ತದೆ. ೫೦% ಕಾಯಿಗಳ ಗಾತ್ರ ೮ ಮಿಮೀ. ನಷ್ಟಿರುತ್ತದೆ. ಇದು ನೀರಾವರಿ ನೀಡಿದ ಪ್ರದೇಶದಲ್ಲಿ ೮.೭೪% ಮತ್ತು ತೇವಾಂಶದ ಒತ್ತಡದ ಪ್ರದೇಶದಲ್ಲಿ ೮.೮೪% ರಷ್ಟು ಸಾರಭೂತ ತೈಲವನ್ನು (esseಟಿಣiಚಿಟ oiಟ) ಹೊಂದಿರುತ್ತದೆ. ಈ ತಳಿಯು ಕರ್ನಾಟಕ ಮತ್ತು ಕೇರಳದ ಏಲಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಐಐಎಸ್‌ಆರ್ ಕಾವೇರಿ ತಳಿಯು ಹೆಚ್ಚು ಸಾಂದ್ರವಾಗಿ ಕಾಯಿಗಳನ್ನು ಬಿಡುವ ತಳಿಯಾಗಿದ್ದು, ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಶೇ. ೭೦ ರಷ್ಟು ಕಾಯಿಗಳು ೮ ಮಿಮೀ. ಗಾತ್ರವನ್ನು ಹೊಂದಿರುತ್ತವೆ. ಈ ತಳಿಯು ಸರಾಸರಿ ೪೮೨ ರಿಂದ ೩೦೮ಕೆಜಿ / ಹೆಕ್ಟೇರ್ ಒಣ ಇಳುವರಿಯನ್ನು ನೀಡುತ್ತದೆ. ಇದು ನೀರಾವರಿ ನೀಡಿದ ಪ್ರದೇಶದಲ್ಲಿ ೯.೦೮ % ಮತ್ತು ತೇವಾಂಶದ ಒತ್ತಡದ ಪ್ರದೇಶದಲ್ಲಿ ೯.೫೧ % ರಷ್ಟು ಸಾರಭೂತ ತೈಲವನ್ನು (esseಟಿಣiಚಿಟ oiಟ) ಹೊಂದಿರುತ್ತದೆ. ಈ ತಳಿಯು ಕರ್ನಾಟಕದಲ್ಲಿ ಬೆಳೆಯಲು ಸೂಕ್ತವಾಗಿದೆ.

ಮಣ್ಣಿನ ತೇವಾಂಶವು ಏಲಕ್ಕಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಅತಿ ಮುಖ್ಯವಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಏಲಕ್ಕಿ ಬೆಳೆಯುವ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಂದ ಯುವ ಕೃಷಿಕರು ಏಲಕ್ಕಿಯನ್ನು ಬೆಳೆಯಲು ಆಸಕ್ತಿ ಹೊಂದಿದ್ದಾರೆ. ಈ ಪ್ರದೇಶಗಳಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಬೆಳೆ ತೇವಾಂಶದ ಒತ್ತಡವನ್ನು ಅನುಭವಿಸುತ್ತದೆ. ಆ ಪ್ರದೇಶಗಳಲ್ಲಿಯೂ ಸಹ ಈ ತಳಿಗಳನ್ನು ಬೆಳೆಯುವ ಪ್ರಯತ್ನ ಮಾಡಬಹುದು. ಇಂದಿನ ಮಾರುಕಟ್ಟೆಯಲ್ಲಿ ಆಕರ್ಷಕ ಹಸಿರು ಬಣ್ಣ ಮತ್ತು ದಪ್ಪಕಾಯಿಗಳನ್ನು ಹೊಂದಿರುವ ಏಲಕ್ಕಿಗೆ ಹೆಚ್ಚಿನ ಆದ್ಯತೆ ಮತ್ತು ದರ ಸಿಗುತ್ತದೆ. ಆದ್ದರಿಂದ ಹೆಚ್ಚಿನ ಶೇಕಡಾವಾರು ದಪ್ಪಕಾಯಿಗಳನ್ನು ಹೊಂದಿರುವ ಐಐಎಸ್‌ಆರ್ ಕಾವೇರಿ ತಳಿಯು ಪ್ರೀಮಿಯಂ ಬೆಲೆಯನ್ನು ಪಡೆಯುತ್ತದೆ.