ಮಡಿಕೇರಿ, ಆ. ೧೧: ವೀರಾಜ ಪೇಟೆ ತಾಲೂಕಿನ ವೀರಾಜಪೇಟೆ ವಲಯದ ಕೆದಮುಳ್ಳೂರು ಕಾರ್ಯಕ್ಷೇತ್ರದ ತೋರ ಗ್ರಾಮದ ೩೦ ಮಂದಿ ಹೆಚ್ಚಿನ ಮಳೆಯಿಂದಾಗಿ ಕಾಳಜಿ ಕೇಂದ್ರದಲ್ಲಿದ್ದು, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಹಾರ ಸಾಮಗ್ರಿಗಳನ್ನು ಜಿಲ್ಲಾ ನಿರ್ದೇಶಕಿ ಲೀಲಾವತಿ, ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್, ಒಕ್ಕೂಟದ ಅಧ್ಯಕ್ಷ ಅರುಣ್ ಕುಮಾರ್, ಊರಿನ ಪ್ರಮುಖರಾದ ಪ್ರಭು ಕುಮಾರ್, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ವಿತರಣೆ ಮಾಡಿದರು.