*ಗೋಣಿಕೊಪ್ಪ, ಆ. ೧೧: ಆಗಸ್ಟ್ ೧೫ ರಂದು ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಪೊನ್ನಂಪೇಟೆಯಿAದ ಗೋಣಿಕೊಪ್ಪಕ್ಕೆ ಫ್ರೀಡಂ ರನ್ ಓಟ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಸಿ.ಟಿ. ಅಪ್ಪಣ್ಣ ತಿಳಿಸಿದ್ದಾರೆ.

ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಬೆಳಿಗ್ಗೆ ೬.೩೦ ಗಂಟೆಗೆ ಓಟ ಆರಂಭಗೊಳ್ಳಲಿದ್ದು, ೬ ಗಂಟೆಗೆ ಸ್ಪರ್ಧಿಗಳು ಸ್ಥಳಕ್ಕೆ ತಲುಪಬೇಕಿದೆ. ಪೊನ್ನಂಪೇಟೆ ಮುಖ್ಯರಸ್ತೆ ಮೂಲಕ ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದವರೆಗೆ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೧ನೇ ತರಗತಿಯಿಂದ ೪, ೫-೭, ಪ್ರೌಢಶಾಲೆ, ಕಾಲೇಜು, ೪೦-೬೦ ವಯೋಮಿತಿಗೆ ಮುಕ್ತ ಓಟ ಸ್ಪರ್ಧೆ, ೬೦ ವರ್ಷ ಮೇಲ್ಪಟ್ಟ ಹಿರಿಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಎಲ್ಲ ವಿಭಾಗಕ್ಕೂ ಮಹಿಳೆಯರು ಮತ್ತು ಪುರುಷರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ, ಉಪಹಾರ ನೀಡಲಾಗುವುದು. ಸ್ಪರ್ಧೆಯನ್ನು ಶೌರ್ಯಚಕ್ರ ಪುರಸ್ಕೃತ ಕರ್ನಲ್ (ನಿ) ಚಂಬಾAಡ ಎಂ. ತಿಮ್ಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಖಜಾಂಚಿ ಸಚಿನ್ ಬೆಳ್ಯಪ್ಪ, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಪಾರುವಂಗಡ ಬೋಸ್ ಪೆಮ್ಮಯ್ಯ ಇದ್ದರು.