ಸೋಮವಾರಪೇಟೆ, ಆ. ೧೧: ಲೀಡ್ ಬ್ಯಾಂಕ್ ಕೊಡಗು ಮತ್ತು ನಬಾರ್ಡ್ ಸಂಯುಕ್ತ ಆಶ್ರಯದಲ್ಲಿ ಐಗೂರಿನ ಬ್ಯಾಂಕ್ ಆಫ್ ಬರೋಡ ವತಿಯಿಂದ ಜನ ಸುರಕ್ಷಾ ಯೋಜನೆ ಕಾರ್ಯಕ್ರಮ ನಡೆಯಿತು.
ಅವಾರ್ಡ್ ಸಂಸ್ಥೆಯ ನೇತೃತ್ವದಲ್ಲಿ ಬ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಮತ್ತು ಪ್ರಧಾನಮಂತ್ರಿ ಭಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ದಿವ್ಯಾ ಬಿ.ಸಿ. ಹಾಗೂ ಹರೀಶ್ ಸಿ.ಜಿ. ಅವರು ಗ್ರಾಹಕರಿಗೆ ಮಾಹಿತಿ ಒದಗಿಸಿದರು.
ಸಾಮಾನ್ಯ ಜನರಿಗೂ ಸಹ ಬ್ಯಾಂಕ್‌ನ ಎಲ್ಲ ಯೋಜನೆಗಳ ಸೌಲಭ್ಯಗಳು ದೊರಕಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಸಮಾಲೋಚಕರು, ಸೈಬರ್ ಕ್ರೆöÊಮ್‌ಗಳ ಬಗ್ಗೆಯೂ ಗ್ರಾಹಕರು ಹೆಚ್ಚಿನ ಜಾಗ್ರತಿ ವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭ ಐಗೂರು ಬ್ಯಾಂಕ್ ಆಫ್ ಬರೋಡ ಶಾಖೆಯ ವ್ಯವಸ್ಥಾಪಕ ಪಯಾಪಲ್ಲಿ ಆನಂದ್ ಬಾಬು ಹಾಗೂ ಬ್ಯಾಂಕ್‌ನ ಸಿಬ್ಬಂದಿಗಳು, ಬ್ಯಾಂಕ್‌ನ ಗ್ರಾಹಕರು ಭಾಗವಹಿಸಿದ್ದರು.