ಮಡಿಕೇರಿ, ಆ. ೧೧: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯ ಸೋಮವಾರಪೇಟೆ ತಾಲೂಕು ಅಕ್ರಮ-ಸಕ್ರಮ (ಬಗರ್ ಹುಕುಂ) ಸಮಿತಿಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಜೆ.ಎಲ್. ಜನಾರ್ಧನ್ ಅವರನ್ನು ದಲಿತ ಸಂಘಟನೆಗಳ ಪ್ರಮುಖರು ಶನಿವಾರಸಂತೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಶನಿವಾರಸಂತೆ ಪ್ರವಾಸಿ ಮಂದಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆ.ಎಲ್. ಜನಾರ್ಧನ್ ಅವರು ಸರ್ಕಾರ ನೀಡಿರುವ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸುವ ಮೂಲಕ ಶಾಸಕರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಜೆ.ಆರ್. ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ವೀರೇಂದ್ರ, ಪ್ರಮುಖರಾದÀ ರಾಮ ಕುಮಾರ್, ಮಂಜು ಪೈಂಟರ್, ಗುರು ಕಾಜೂರು, ನವೀನ್, ನಾಗರಾಜ್ ಎಂ.ಜೆ., ಮಂಜುನಾಥ ಮಾದ್ರೆ, ವಿಶ್ವ ಎಂ.ಪಿ., ನಿಂಗರಾಜು ಚೀಕನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.