*ಗೋಣಿಕೊಪ್ಪ, ಆ. ೧೦: ಪೊನ್ನಂಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೧೨ ರಂದು ಪೊನ್ನಂಪೇಟೆಯಿAದ ಗೋಣಿಕೊಪ್ಪಕ್ಕೆ ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ಬೃಹತ್ ವಾಹನ ಜಾಥಾ ಆಯೋಜಿಸಲಾಗಿದೆ ಎಂದು ಪುತ್ತಾಮನೆ ಅನಿಲ್ ಪ್ರಸಾದ್ ತಿಳಿಸಿದ್ದಾರೆ.
ಸುಮಾರು ೪೦೦ ಕ್ಕೂ ಹೆಚ್ಚು ವಾಹನಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ದ್ವಿಚಕ್ರ ಮತ್ತು ನಾಲ್ಕುಚಕ್ರದ ವಾಹನಗಳಲ್ಲಿ ದೇಶಭಕ್ತರು ಅಖಂಡ ಭಾರತ ಸಂಕಲ್ಪದ ಸಂದೇಶವನ್ನು ಸಾರಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ ೯ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಜಾಥಾಕ್ಕೆ ಚಾಲನೆ ನೀಡಲಾಗುತ್ತದೆ. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಬೆಳಿಗ್ಗೆ ೧೧.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ವಿಹೆಚ್ಪಿ ನಿಕಟಪೂರ್ವ ಪ್ರಾಂತ ಗೋರಕ್ಷಕ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಆಗಮಿಸಿಲಿದ್ದಾರೆ. ನಿವೃತ್ತ ಬ್ಲಾö್ಯಕ್ ಕ್ಯಾಟ್ ಕಮಾಂಡೊ ಕ್ಯಾಪ್ಟನ್ ಮಲ್ಲೇಂಗಡ ಎಂ. ಪೂಣಚ್ಚ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ದೇಶಭಕ್ತರು ಹೆಚ್ಚಾಗಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಗಸ್ಟ್ ೧೫ ಸ್ವಾತಂತ್ರö್ಯ ದಿನಾಚರಣೆ ಜತೆಗೆ ಆಗಸ್ಟ್ ೧೪ ರ ಮಧ್ಯರಾತ್ರಿ ಅಖಂಡ ಭಾರತ ನಿರ್ಮಾಣ ಕನಸಿಗಾಗಿ ಹೋರಾಡಿ ತ್ಯಾಗ ಮಾಡಿದವರನ್ನು ಕೂಡ ನೆನಪಿಸಿಕೊಳ್ಳಬೇಕಾದ ದಿನವಾಗಿದೆ. ಅಖಂಡ ಭಾರತ ಛಿದ್ರಗೊಂಡ ದಿನವಾಗಿದೆ. ಇಂತಹ ಮಾಹಿತಿಯನ್ನು ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಭಾರತ ದೇಶದ ಮಣ್ಣಿನಲ್ಲಿ ಶಾಂತಿಯುತ ಜೀವನ ನಡೆಸಲು ಅಖಂಡ ಭಾರತ ನಿರ್ಮಾಣ ಮುಖ್ಯ ಗುರಿಯಾಗಬೇಕು ಎಂಬ ಸಂದೇಶವನ್ನು ಸಾರಬೇಕಿದೆ ಎಂದರು.
ಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಪ್ರಮುಖ್ ಅಲ್ಲುಮಾಡ ಶರತ್ ಪೆಮ್ಮಯ್ಯ, ತಾಲೂಕು ಸಂಯೋಜಕ್ ಸುಳ್ಳಿಮಾಡ ಪಿ. ಸಂಪತ್, ಮುಳ್ಳೇಂಗಡ ಸುಖೇಶ್, ಅಲ್ಲುಮಾಡ ತಿಮ್ಮಯ್ಯ ಇದ್ದರು.