ಶನಿವಾರಸಂತೆ, ಆ. ೧೦: ಮಕ್ಕಳು-ಮೊಮ್ಮಕ್ಕಳ ಪ್ರೀತಿಯಿಂದ ವಂಚಿತರಾಗುವ ಬಹುತೇಕ ಅಜ್ಜ-ಅಜ್ಜಿಯರಿಗೆ ಒಂದು ಸಾಂತ್ವನದ ನುಡಿ, ಮಕ್ಕಳು-ಮೊಮ್ಮಕ್ಕಳ ಗೌರವ, ಎಲ್ಲರೊಂದಿಗೆ ಬೆರೆತು ಆಟವಾಡುವ ಸಂತಸ, ಬಹುಮಾನ ಗಿಟ್ಟಿಸಿದ ಖುಷಿ. ಈ ಅನುಭವಕ್ಕೆ ವೇದಿಕೆ ಕಲ್ಪಿಸಿದ್ದು ಕೊಡ್ಲಿಪೇಟೆಯ ಸೆಂಟ್ ಆನ್ಸ್ ಆಂಗ್ಲ ಮಾದ್ಯಮ ಶಾಲೆ.

ಶಾಲೆಯಲ್ಲಿ ಆಚರಿಸಿದ ‘ ಅಜ್ಜ-ಅಜ್ಜಿಯರ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜ್ಜ-ಅಜ್ಜಿಯರ ಮನಸ್ಸಲ್ಲಿ ಸಂಭ್ರಮ ಮನೆಮಾಡಿತ್ತು. ಪ್ರಸ್ತುತ ದಿನಗಳಲ್ಲಿ ತಂದೆ-ತಾಯಿಯರ ಮುಪ್ಪಿನ ಕಾಲದಲ್ಲಿ ಜೊತೆಗಿದ್ದು ನೋಡಿಕೊಳ್ಳುವ ಪ್ರವೃತ್ತಿ ಮರೆಯಾಗಿದೆ.