ಮಡಿಕೇರಿ ಆ.೧೦ : ಅತ್ಯಂತ ಸೂಕ್ಷö್ಮ ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿನ ಪ್ರಕೃತಿಯ ಮೇಲಿನ ದಾಳಿಯೇ ಇತ್ತೀಚೆಗೆ ಸಂಭವಿಸುತ್ತಿರುವ ವಿಕೋಪಗಳಿಗೆ ಕಾರಣ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿಯನ್ನು ಸ್ಥಗಿತಗೊಳಿಸ ಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಮಾದಾಪುರದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೊಡಗಿನಲ್ಲಿ ನಿರಂತರವಾಗಿ ಹೊರ ಪ್ರದೇಶದ ಬಂಡವಾಳಶಾಹಿಗಳಿಗೆ, ಕಾರ್ಪೋರೇಟ್ ವಲಯಗಳಿಗೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಭೂಮಿಯನ್ನು ಮಿತಿ ಮೀರಿ ನೀಡಿದರೆ ಭವಿಷ್ಯತ್ತಿಗೆ ತೊಂದರೆಯಾಗಲಿದೆ. ಈ ಹಿಂದೆ ೨೦೧೮ ರಲ್ಲಿ ಸೂರ್ಲಬ್ಬಿ ನಾಡ್, ಮುತ್ತುನಾಡ್, ಪೊರಮಲೆನಾಡ್ ಮತ್ತು ಬದಿಗೇರಿನಾಡ್ ನಲ್ಲಿ ಭೀಕರ ಜಲಕಂಟಕದಿAದ ಅನಾಹುತ ಸಂಭವಿಸಿತ್ತು, ಅಲ್ಲದೆ ಅನೇಕ ಮನೆಗಳು ನಾಶವಾಗಿದ್ದವು.

ಸೂರ್ಲಬ್ಬಿ ನಾಡಿನ ಪಕ್ಕದಲ್ಲೇ ಇರುವ ಸಕಲೇಶಪುರ ಮತ್ತು ಸುಬ್ರಮಣ್ಯದಲ್ಲಿ ಈ ಹಿಂದೆ ಎತ್ತಿನಹೊಳೆ ಯೋಜನೆಗಾಗಿ ಸ್ಫೋಟಕಗಳನ್ನು ಬಳಸಲಾಗಿತ್ತು. ಇದರ ಪರಿಣಾಮವಾಗಿ ೨೦೧೮ ರಲ್ಲಿ ಸೂರ್ಲಬ್ಬಿಯಲ್ಲಿ ಜಲ ಅನಾಹುತ ನಡೆದಿದೆ. ಮುಂದೊAದು ದಿನ ಕೇರಳದ ವಯನಾಡಿನ ರೂಪದ ದುರಂತ ಸಂಭವಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಎನ್.ಯು. ನಾಚಪ್ಪ ಆತಂಕ ವ್ಯಕ್ತಪಡಿಸಿದರು.

ಯುನೆಸ್ಕೋದ ವಿಶ್ವ ಪರಂಪರೆಯ ತಾಣದ ಅಡಿಯಲ್ಲಿ ಬರುವ ತಡಿಯಂಡಮೋಳ್‌ನ ಕೆಳಗೆ ೩೦೦ ಏಕರೆ ಕಾಫಿ ತೋಟಗಳು ಪರಿವರ್ತನೆಯಾಗಿಬೆ. ಸೂರ್ಲಬ್ಬಿ ಮತ್ತು ಅರೆಕಾಡು ಭಾಗದಲ್ಲಿ ತಲಾ ೩೦೦ ಎಕರೆ ಭೂಮಿ ಭೂಪರಿವರ್ತನೆ ಯಾಗಿ ಟೌನ್ ಶಿಪ್‌ಗಳ ನಿರ್ಮಾಣಕ್ಕೆ ಸಜ್ಜಾಗುತ್ತಿದೆ ಎಂದು ಎನ್.ಯು. ನಾಚಪ್ಪ ಆರೋಪಿಸಿದರು.

ತಲಕಾವೇರಿ-ಭಾಗಮಂಡಲ ಕೊಡವ ಟ್ರಸ್ಟಿನಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ ಮನವಿ ಮಾಡಿದರೂ ಜಿಲ್ಲಾಡಳಿತ ಈ ಅರ್ಜಿಗಳನ್ನು ತಿರಸ್ಕರಿಸಿದೆ. ಆದರೆ ಇದೇ ಆಡಳಿತ ಹೊರಗಿನ ಮೆಗಾ ರೆಸಾರ್ಟ್ಗಳು, ಕಾರ್ಪೊರೇಟ್ ವಲಯಗಳು ಉದ್ಯಮಿಗಳಿಗೆ ಭೂಪರಿವರ್ತನೆಯ ಪ್ರಮಾಣಪತ್ರವನ್ನು ನೀಡಲು ದಿನದ ೨೪ ಗಂಟೆ ಮತ್ತು ವರ್ಷದ ೩೬೫ ದಿನವೂ ಕಾರ್ಯನಿರ್ವಹಿಸುತ್ತದೆ ಎಂದು ಆರೋಪಿಸಿದರು.

ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯ ಆಡಳಿತ ವ್ಯವಸ್ಥೆಯ ನಿರಂತರ ತಪ್ಪಿನಿಂದಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಇದರಿಂದ ಹೊರಬರಲು ಮತ್ತು ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಎನ್.ಯು. ನಾಚಪ್ಪ ತಿಳಿಸಿದರು.

ಮುಂದಿನ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ಆ.೧೮ ರಂದು ಸುಂಟಿಕೊಪ್ಪ, ಆ.೨೦ ರಂದು ಕುಟ್ಟ, ಆ.೨೯ ರಂದು ಮೂರ್ನಾಡು ಮತ್ತು ಸೆ.೯ ರಂದು ನಾಪೋಕ್ಲುವಿನಲ್ಲಿ ನಡೆಯಲಿದೆ ಎಂದು ಎನ್.ಯು. ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಜಾಗೃತಿ ಕಾರ್ಯಕ್ರಮದಲ್ಲಿ ನಾಪಂಡ ರಮ್ಯ, ಮೇದೂರ ಪ್ರೀತಿಕಾ, ನಾಪಂಡ ಅರುಣ, ಮೇದೂರ ಕಂಠಿ, ಮಾಳೆಯಂಡ ಜಗದೀಶ್, ಬಾಚಿನಾಡಂಡ ಗಿರೀಶ್, ಬಾಚಿನಾಡಂಡ ಗಣೇಶ್, ಮೇದೂರ ಚರ್ಮಣ, ಮುದ್ದಂಡ ಗಪ್ಪು, ಮುದ್ದಂಡ ಲಕ್ಷ್ಮಣ್, ನಾಪಂಡ ಶಿವಕುಮಾರ್, ಮೇದೂರ ಕಾಶಿ, ಮೇದೂರ ಸುರೇಶ್, ಮೇದೂರ ಕಾರ್ಯಪ್ಪ, ಬೈರಾಜಂಡ ದರ್ಶನ್, ತಂಬುಕುತ್ತೀರ ಗಪ್ಪು, ತಂಬುಕುತ್ತೀರ ಲಿಂಗಪ್ಪ, ಐಮುಡಿಯಂಡ ಉತ್ತಪ್ಪ, ಕೂಪದೀರ ಸಾಬು, ಉಡುವೇರ ಮಿಟ್ಟು, ಉಡುವೇರ ಕಿರಣ್, ಉಡುವೇರ ಉಮೇಶ್, ಉಡುವೇರ ಮಂದಣ್ಣ, ಉದ್ದಿನಾಡಂಡ ಪ್ರದೀಪ್, ಪೊರೇರ ಶ್ಯಾಮ್, ಉದ್ದಿನಾಡಂಡ ಗಣೇಶ್, ಮಂದೆಯAಡ ವಸಂತ್, ಮಂದೆಯAಡ ರಜಿ ಬೆಳ್ಯಪ್ಪ, ಮೋರ್ಕಂಡ ಕಾಶಿ, ಮೊರ್ಕಂಡ ಅರುಣ್, ಸರ್ಕಂಡ ವಿನೋದ್, ಬಾಚಿನಾಡಂಡ ಲೋಹಿತ್, ಪಾಸುರ ಕುಂಞಣ್ಣ, ಪಾಸುರ ಪೊನ್ನಪ್ಪ, ನಾಗಂಡ ದಿನಕರ್, ನಾಗಂಡ ದೇವಯ್ಯ, ಅಡ್ಡಂಡ ಚೀಯಣ್ಣ, ಕುಟ್ಟಂಡ ಪ್ರಕಾಶ್, ಕುಟ್ಟಂಡ ನಂದ, ಮೊಣ್ಣಂಡ ಸವಿ ನಾಣಯ್ಯ, ಕುಟ್ಟಂಡ ದಾದು, ಕುಟ್ಟಂಡ ಸಾಗರ್, ಕುಟ್ಟಂಡ ಮಾದಪ್ಪ, ಓಡಿಯಂಡ ಶಿವಯ್ಯ, ಓಡಿಯಂಡ ರವಿ, ಚೆಟ್ಟೀರ ಗಗನ್, ಚೆಟ್ಟೀರ ಗಣಪತಿ ಹಾಗೂ ಮಾದಾಪುರದ ಸುತ್ತಮುತ್ತಲಿನ ಕೊಡವ, ಕೊಡವತಿಯರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.