ಶ್ರೀಮಂಗಲ, ಆ. ೧೦: ಜಬ್ಬೂಮಿ ಸಂಘಟನೆ, ರೂಟ್ಸ್ ಆಫ್ ಕೊಡಗು ಹಾಗೂ ವಿವಿಧ ಸಂಘಟನೆಗಳ ಜಂಟಿ ಆಶ್ರಯದಲ್ಲಿ "ಕೊಡಗಿನ ಕೃಷಿಯೊಂದಿಗೆ ಸಂಸ್ಕೃತಿ ಮಿಡಿತ ಹೊಂದಿದ್ದು, ಮರೆಯಾಗುತ್ತಿರುವ ಕೃಷಿ ಪರಂಪರೆ ಬಗ್ಗೆ ಅಭಿಮಾನ ಮೂಡಿಸಿ, ಉತ್ತೇಜಿಸಿ ಮತ್ತು ಕೊಡವ ಸಮುದಾಯಗಳ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಶನಿವಾರ ಬಿಟ್ಟಂಗಾಲದಲ್ಲಿ ಸಂಭ್ರಮದಿAದ ನಡೆಯಿತು.
ಬಿಟ್ಟಂಗಾಲ ಗ್ರಾಮದ ನಾಯಡ ಕುಟುಂಬದ ಭತ್ತದ ಗದ್ದೆಯಲ್ಲಿ ಮುರುವಂಡ ಮಿಥುನ್ ಅಣ್ಣಯ್ಯ, ಪೊನ್ನಕಚ್ಚಿರ ಪುನೀತ್ ಅವರ ಮೇಲುಸ್ತುವಾರಿಯ ಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನೂರಾರು ಕಿರಿಯರು, ಹಿರಿಯರು ಭಾಗವಹಿಸಿ, ಪ್ರೇಕ್ಷಕರ ಪ್ರೋತ್ಸಾಹ-ಬೆಂಬಲ ದೊಂದಿಗೆ ಕೆಸರು ಗದ್ದೆಯಲ್ಲಿ ಮಿಂದು, ಎದ್ದು, ಬಿದ್ದು ಕ್ರೀಡಾ ಉತ್ಸಾಹ ಪ್ರದರ್ಶಿಸಿದರು.
ಕ್ರೀಡಾ ಕೂಟದಲ್ಲಿ ೬ ವರ್ಷದ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ನಾಟಿ ಗದ್ದೆಯಲ್ಲಿ ಭಾಗವಹಿಸಿ ಸಂತಸಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ಗೆಜ್ಜೆತಂಡ್ ಎದುರು ಪುದಿಯೊಕ್ಕಡ ಹರೀಶ್ ಅವರ ಮೂಲಕ "ತಪ್ಪಡ್ಕ" ಕಟ್ಟಿ ಕಾರ್ಯಕ್ರಮದ ಯಶಸ್ವಿಗೆ, ಕೊಡಗಿನ ಪ್ರಕೃತಿ, ಜೀವ ಜಲ, ಪರಂಪರೆಯ ಗತವೈಭವ ಮರುಕಳಿಸಿ ಅದರ ಸಂರಕ್ಷಣೆಗೆ ಪ್ರಾರ್ಥಿಸಲಾಯಿತು.
ಪುಚ್ಚಿಮಂಡ ಬಬ್ಬುಲು, ಮಾಚೆಟ್ಟಿರ ಸುನಿಲ್ ತಂಡ ಕೋವಿಯಲ್ಲಿ ೧೨ ಸುತ್ತು ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಾಯಡ ಶ್ಯಾಮ್ ಸೋಮಣ್ಣ ಅವರೊಂದಿಗೆ ಜಬ್ಬೂಮಿ ಸಂಘಟನೆ ಮತ್ತು ರೂಟ್ಸ್ ಆಫ್ ಕೊಡಗು ಪ್ರಮುಖರು ಚಾಲನೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಬ್ಬೂಮಿ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಮಚ್ಚಮಾಡ ಅನೀಶ್ ಮಾದಪ್ಪ,
(ಮೊದಲ ಪುಟದಿಂದ) ಮಾಚಂಗಡ ಸಚಿನ್, ಉಳುವಂಗಡ ಲೋಹಿತ್ ಭೀಮಯ್ಯ, ಮಲ್ಲಪನೆರ ವಿನು ಚಿಣ್ಣಪ್ಪ, ಪಾಲೆಂಗಡ ಅಮಿತ್ ಭೀಮಯ್ಯ,, ಗುಡಿಯಂಗಡ ನಿಖಿಲ್, ಚೇಂದAಡ ಶಮ್ಮಿ ಮಾದಯ್ಯ, ಅಚ್ಚಾಂ ಡಿರ ಕುಶಾಲಪ್ಪ, ಅಪ್ಪಂಡೇರAಡ ಯಶ್ವಂತ್, ಮಾಚೆಟ್ಟಿರ ಸುನಿಲ್, ಪುಚ್ಚಿಮಂಡ ಬಬ್ಬುಲ್ ಅಪ್ಪಯ್ಯ, ಪಾಡೆಯಂಡ ದೀಪಕ್ ದೇವಯ್ಯ ಹಾಗೂ ಪ್ರಮುಖರು ಹಾಜರಿದ್ದರು. ಉಳುವಂಗಡ ಲೋಹಿತ್ ಭೀಮಯ್ಯ ಅವರು ಜಬ್ಬೂಮಿ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರಿಗೆ, ಶಾಲಾ ಮಕ್ಕಳಿಗೆ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಕೆಸರು ಗದ್ದೆ ನಡಿಗೆ, ಕೈಪುಳಿ ಹಾಗೂ ಕೈಕಣೆ ನಡಿಗೆ ಗಮನ ಸೆಳೆಯಿತು.
ವಿಶೇಷ ಕಾರ್ಯಕ್ರಮವಾಗಿ ವೀರಾಜಪೇಟೆ ಪ್ರಗತಿ ಶಾಲಾ ಮಕ್ಕಳಿಂದ ಪ್ರಾಯೋಗಿಕ ಗದ್ದೆ ನಾಟಿ ಮಾಡಲಾಯಿತು. ಪೆರುವನಾಡ್ ಗೆ ಸಂಬAಧಪಟ್ಟ ಸತತವಾಗಿ ಭತ್ತದ ಕೃಷಿ ಮಾಡುತ್ತಿರುವ ಬುಟ್ಟಿಯಂಡ ಪಟ್ಟು ಅಯ್ಯಪ್ಪ, ಬುಟ್ಟಿಯಂಡ ಚಿಮ್ಮಿ ಪೂಣಚ್ಚ, ಪುಚ್ಚಿಮಂಡ ಈಶ್ವರ ಮುತ್ತಪ್ಪ, ಬೊಪ್ಪಂಡ ರವಿ, ಪೊನ್ನಕಚ್ಚಿರ ಕುಶ ಬಿದ್ದಪ್ಪ, ಕುಪ್ಪಂಡ ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ಶಾಲೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇತರ ಭಾಗಗಳಿಂದ ಪೈಪೋಟಿಯಲ್ಲಿ ಭಾಗ ವಹಿಸಿದ್ದರು. ಮಾಳೇಟೀರ ಶ್ರೀನಿವಾಸ್ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಕೊಡಗು ಜಾವಾ ಎಸ್ಡಿ ಮೋಟಾರ್ ಸೈಕಲ್ ಕ್ಲಬ್, ವೀರಾಜಪೇಟೆಯ ಪ್ರಗತಿ ಶಾಲೆ, ಕೊಡ ವಾಮೆರ ಕೊಂಡಾಟ, ತಿಂಗಕೊರ್ ಮೊಟ್ಟ್ ತಲಕಾವೇರಿ, ಮೈಸೂರು ಕೊಡವ ಸ್ಟೂಡೆಂಟ್ಸ್ ಅಸೋಸಿಯೇ ಷನ್, ಕನೆಕ್ಟಿಂಗ್ ಕೊಡವಾಸ್, ಬೆಂಗಳೂರು ಕೊಡವ ಸಮಾಜ ಯೂತ್ ಕೌನ್ಸಿಲ್, ಬಾಳೆಹೊನ್ನೂರು ವಿನ ಮಹಾಲಕ್ಷಿö್ಮ ಕಾಫಿ ಟ್ರೇಡರ್ಸ್, ದಿಯನ್ ಎಂಟರ್ ಪ್ರೆöÊಸೆಸ್, ಕೊಡವ ನಾಡ್, ಕೆಫೆ ಹೆ ಶೇಕ್ ಸಹ ಪ್ರಯೋಜನೆ ನೀಡಿತ್ತು. ದಿನವಿಡೀ ಕೆಸರು ಗದ್ದೆಯಲ್ಲಿ ಜನರು ಉತ್ಸಾಹ ದಿಂದ ಭಾಗಿಗಳಾಗಿ ಸಂಭ್ರಮಿಸು ವುದರೊಂದಿಗೆ ಕೃಷಿಯ ಮಹತ್ವದ ಬಗ್ಗೆಯೂ ಅರಿಯಲು ಸಹಕಾರಿಯಾ ಯಿತು. -ಹರೀಶ್ ಮಾದಪ್ಪ