ಸೋಮವಾರಪೇಟೆ, ಆ. ೯: ನಿನ್ನೆ ರಾತ್ರಿ ಪಟ್ಟಣದ ಬಾರ್‌ವೊಂದರಲ್ಲಿ ಕುಡಿದು ಗಲಾಟೆ ನಡೆಸಿ, ಬಿಯರ್ ಬಾಟಲ್ ಹಾಗೂ ಚೂರಿಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ಮೂವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಕ್ಲಬ್‌ರಸ್ತೆಯಲ್ಲಿರುವ ಬಾರ್‌ನಲ್ಲಿ ಹಣಕಾಸಿನ ವಿಚಾರಕ್ಕೆ ಜಗಳ ಮಾಡಿ ತಾನೂ ಸೇರಿದಂತೆ ತನ್ನ ಸ್ನೇಹಿತನ ಮೇಲೆ ಹಲ್ಲೆ ನಡೆಸಿರುವುದಾಗಿ ಆಲೇಕಟ್ಟೆ ರಸ್ತೆ ನಿವಾಸಿ ಮೊಯ್ದೀನ್ ಅವರ ಪುತ್ರ ಮಹಮ್ಮದ್ ರಯೀಜ್ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳಾದ ಜನತಾ ಕಾಲೋನಿ ನಿವಾಸಿ ಕರೀಂ ಬೇಗ್ (ಇಮ್ಮು), ಅಜೀಂ ಬೇಗ್ (ಅಡ್ಡು) ಕಾನ್ವೆಂಟ್ ಬಾಣೆಯ ಅಜರುದ್ದೀನ್ ಅವರುಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆಲೇಕಟ್ಟೆಯ ನಿವಾಸಿ ರಯೀಜ್ ಮತ್ತು ಗಾಂಧಿನಗರದ ಸಿದ್ದೀಕ್ ಅವರುಗಳು ಬಾರ್‌ಗೆ ತೆರಳಿದ ಸಂದರ್ಭ, ಮೂವರು ಆರೋಪಿಗಳು ಅದಾಗಲೇ ಬಾರ್‌ನಲ್ಲಿದ್ದು, ಈ ಹಿಂದೆ ಕರೀಂ ಬೇಗ್‌ನಿಂದ
ಬಾಟಲ್ - ಚೂರಿಯಿಂದ ಹಲ್ಲೆ : ಮೂವರ ಬಂಧನ
(ಮೊದಲ ಪುಟದಿಂದ) ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಿದ್ದರೂ ಸಹ ಬಡ್ಡಿ ಹಣ ನೀಡುವಂತೆ ಜಗಳ ತೆಗೆದಿದ್ದಾರೆ.
ಈ ಸಂದರ್ಭ ಕರೀಂ ಬೇಗ್‌ನ ಸಹೋದರ ಅಜೀಂ ಬೇಗ್ ಬಿಯರ್ ಬಾಟಲ್‌ನಿಂದ ತಲೆಗೆ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಬಂದ ಸಿದ್ದೀಕ್‌ನಿಗೂ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಓಡಿದ ಸಿದ್ದೀಕ್‌ನನ್ನು ಬೆನ್ನಟ್ಟಿದ ಮೂವರು ಪ.ಪಂ. ಕಚೇರಿ ಎದುರು ಅಡ್ಡಗಟ್ಟಿದ್ದು, ಈ ಸಂದರ್ಭ ಕರೀಂ ಬೇಗ್ ತನ್ನ ಬಳಿಯಿದ್ದ ಚಾಕುವಿನಿಂದ ಸಿದ್ದೀಕ್‌ನ ಬೆನ್ನಿನ ಭಾಗಕ್ಕೆ ನಾಲ್ಕೆöÊದು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಇದರೊಂದಿಗೆ ಒಂದು ಮೊಬೈಲ್ ಮತ್ತು ೧೨೦೦ ನಗದು ಕಿತ್ತುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಾದೇವ, ಠಾಣಾಧಿಕಾರಿ ರಮೇಶ್‌ಕುಮಾರ್ ಅವರುಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.