ಸುಂಟಿಕೊಪ್ಪ, ಆ. ೯: ಸುಂಟಿಕೊಪ್ಪ ಶಾಂತಿಗೇರಿ ರಾಷ್ಟಿçÃಯ ಹೆದ್ದಾರಿ ೨೭೫ರಲ್ಲಿ ಗುರುವಾರ ರಾತ್ರಿ ೧೦ ಗಂಟೆ ಸುಮಾರಿಗೆ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಪಿರಿಯಾಪಟ್ಟಣ ತಾಲೂಕು ನವಿಲೂರು ಗ್ರಾಮದ ಆಕಾಶ್ (೨೪) ಹಾಗೂ ಪ್ರಸನ್ನ (೨೪) ಮೃತ ದುರ್ದೈವಿಗಳು.

ಪಿರಿಯಾಪಟ್ಟಣದ ನವಿಲೂರುವಿನಿಂದ ಮಡಿಕೇರಿಗೆ ದ್ವಿಚಕ್ರ ವಾಹನದಲ್ಲಿ (ಕೆಎ೪೫ ವೈ ೭೩೩೧) ಸೆಂಟ್ರಿAಗ್ ಕೆಲಸದ ನಿಮಿತ್ತ ಆಗಮಿಸುತ್ತಿದ್ದ ಸಂದರ್ಭ ಶಾಂತಿಗೇರಿ ಸಮೀಪ ರಾತ್ರಿ ೧೦ ಗಂಟೆಯ ಸಂದರ್ಭದಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ. ಇದರಿಂದ ತೀವ್ರ ಗಾಯಗೊಂಡ ಆಕಾಶ್ ಎಂಬಾತ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ. ಅಪಘಾತದಿಂದ ಚಿಂತಾಜನಕನಾಗಿದ್ದ ಇನ್ನೋರ್ವ ಸವಾರ ಪ್ರಸನ್ನ ಎಂಬಾತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾ ಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾನೆ.

(ಮೊದಲ ಪುಟದಿಂದ) ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಯಿತು.