ಗೋಣಿಕೊಪ್ಪಲು, ಆ. ೯: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಸಂಘದ ಆವರಣದಲ್ಲಿ ಜರುಗಿತು. ಅಧ್ಯಕ್ಷರಾಗಿ ಅಜ್ಜಿಕುಟ್ಟಿರ ಪ್ರವೀಣ್ ಮುತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮೇಲತಂಡ ಎ. ರಮೇಶ್ ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ೧ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಬಿ.ಜಿ. ಸಂದೀಪ್ ಅವರು ಅಜ್ಜಿಕುಟ್ಟಿರ ಪ್ರವೀಣ್ ಅವರನ್ನು ಅಧ್ಯಕ್ಷರಾಗಿ, ಉಪಾಧ್ಯಕ್ಷರನ್ನಾಗಿ ಮೇಲತಂಡ ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಿ ಘೋಷಣೆ ಮಾಡಿದರು. ಕಳೆದ ಮೂರು ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವÀ ಅಜ್ಜಿಕುಟ್ಟಿರ ಪ್ರವೀಣ್ ಮುತ್ತಪ್ಪ ಅವರನ್ನು ಸರ್ವ ಸದಸ್ಯರು ಪ್ರಸ್ತುತ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡಲು ಒಮ್ಮತ್ತದ ತೀರ್ಮಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ೫ ವರ್ಷದ ಅವಧಿಗೆ ಪ್ರವೀಣ್ ಮುತ್ತಪ್ಪ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನವನ್ನು ತಲಾ ೨೦ ತಿಂಗಳಿಗೆ ನಿಗದಿಗೊಳಿಸಿದ್ದು ಮೊದಲ ಅವಧಿಯಲ್ಲಿ ಮೇಲತಂಡ ಎ. ರಮೇಶ್ ಅವರನ್ನು ನೇಮಕ ಮಾಡಲಾಯಿತು.
(ಮೊದಲ ಪುಟದಿಂದ) ಎರಡನೇ ಅವಧಿಯಲ್ಲಿ ತೀತಿರ ಊರ್ಮಿಳ ಹಾಗೂ ೩ನೇ ಅವಧಿಗೆ ಮತ್ರಂಡ ಬಿ. ಬೋಪಣ್ಣ ಅವರನ್ನು ನೇಮಕ ಮಾಡಲಾಗುವುದು ಎಂದು ಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬೊಜ್ಜಂಗಡ ಎನ್. ಸುನೀಲ್, ಕುಪ್ಪಣಮಾಡ ಕುಶ ಹಾಗೂ ಸಹ ಪ್ರಮುಖ್ ಕೊಟ್ಟಂಗಡ ರಾಜ ತಿಳಿಸಿದರು.
ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ವಿಚಾರದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿದ್ದರು. ಇದನ್ನು ಬಿಜೆಪಿ ಸದಸ್ಯರು ಅಲ್ಲಗಳೆದಿದ್ದರು. ೨ ಪಕ್ಷಗಳ ಆರೋಪ ಪ್ರತ್ಯಾರೋಪಗಳು ನಡೆದಿದ್ದವು. ನಂತರದ ಬೆಳವಣಿಗೆಯಲ್ಲಿ ಚುನಾವಣೆಯ ಮೇಲೆ ಪರಿಣಾಮ ಬೀರಿತ್ತು. ಸಹಕಾರ ಸಂಘಕ್ಕೆ ಇಲಾಖೆ ವತಿಯಿಂದ ವಿಶೇಷ ಅಧಿಕಾರಿಯನ್ನು ನೇಮಕ ಗೊಳಿಸಲಾಗಿತ್ತು.
ಹಲವು ಬಾರಿ ಚುನಾವಣೆಯ ದಿನಾಂಕ ನಿಗದಿಗೊಂಡಿದ್ದರೂ ವಿವಿಧ ಕಾರಣಗಳಿಂದ ಚುನಾವಣೆಯು ಮುಂದೂಡಲ್ಪಟ್ಟಿತ್ತು. ಅಂತಿಮವಾಗಿ ೧೦ ತಿಂಗಳ ನಂತರ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆದು ೧೩ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂತಿಮವಾಗಿ ಬಿಜೆಪಿ ಬೆಂಬಲಿತ ೧೨ ಮಂದಿ ಗೆಲುವು ಸಾಧಿಸಲ್ಪಟ್ಟು ಬಹುಮತ ದಾಖಲಿಸಿದ್ದರು. ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲ ಗೆಲುವು ಪಡೆದಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಅಜ್ಜಿಕುಟ್ಟಿರ ಪ್ರವೀಣ್ ಮುತ್ತಪ್ಪ ಪ್ರತಿಕ್ರಿಯಿಸಿ, ಹುದಿಕೇರಿ ಸಹಕಾರ ಸಂಘವು ಸ್ವಂತ ಬಂಡವಾಳದಿAದ ಅಭಿವೃದ್ದಿಯನ್ನು ಕಂಡಿದೆ. ಈ ಹಿಂದಿನ ಮೂರು ಅವಧಿಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಹಿನೆÀ್ನಲೆಯಲ್ಲಿ ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರುಗಳು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಬ್ಯಾಂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಹಿರಿಯ ಸಹಕಾರಿ ಧುರೀಣರು ಕಟ್ಟಿ ಬೆಳೆಸಿರುವ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯ ಲಾಗುವುದು ಸಂಘದ ಸದಸ್ಯರಿಗೆ ಸಕಾಲದಲ್ಲಿ ಅಗತ್ಯವಿರುವ ಸಾಲ ಯೋಜನೆ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ನೀಡಲಾಗುವುದು ಎಂದರು.
ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೇಲತಂಡ ಎ.ರಮೇಶ್ ಮಾತನಾಡಿ ಸಂಘದ ಸದಸ್ಯರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರುಗಳಾದ ಕೋಳೆರ ಎಸ್. ನರೇಂದ್ರ, ಕಾಳಿಮಾಡ ಎ. ನರೇಂದ್ರ, ಮತ್ರಂಡ ಬಿ. ಬೋಪಣ್ಣ, ಅಜ್ಜಿಕುಟ್ಟಿರ ಎ. ಬೋಪಣ್ಣ, ಕಿರಿಯಮಾಡ ಕೆ. ಮಂದಣ್ಣ, ಚೇಂದಿರ ಡಿ. ತಿಮ್ಮಯ್ಯ, ತೀತಿರ ಎಸ್. ಊರ್ಮಿಳ, ಕಾಳೇಂಗಡ ಪಿ. ಗಾಯಿತ್ರಿ, ಹೆಚ್.ಕೆ. ರಾಜಪ್ಪ, ಜೆ.ಬಿ. ಗಂಗು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸಿ. ಸೀತಮ್ಮ, ವಿಶೇಷಾಧಿಕಾರಿ ಕರುಣ್ ಕಾರ್ಯಪ್ಪ ಉಪಸ್ಥಿತರಿದ್ದರು. ಚುನಾವಣಾಧಿಕಾರಿಗಳಾದ ಬಿ.ಜಿ. ಸಂದೀಪ್, ಚುನಾವಣಾ ಪ್ರಕ್ರಿಯೆ ನಡೆಸಿದರು.
ಈ ವೇಳೆ ಬಿಜೆಪಿ ಪಕ್ಷದ ಹುದಿಕೇರಿ ಶಕ್ತಿ ಕೇಂದ್ರದ ಪ್ರಮುಖರಾದ ಬೊಜ್ಜಂಗಡ ಎನ್. ಸುನಿಲ್, ಕುಪ್ಪಣಮಾಡ ಕುಶ, ಸಹ ಪ್ರಮುಖರಾದ ಕೊಟ್ಟಂಗಡ ರಾಜ, ತ್ರಿಶನ್, ಬೂತ್ ಅಧ್ಯಕ್ಷರಾದ ರಮೇಶ್, ಗಿರೀಶ್, ಹರೀಶ್ ಹಿರಿಯ ಸಹಕಾರಿಗಳಾದ ಹೊಟ್ಟೆಂಗಡ ರಮೇಶ್, ಅಳಮೇಂಗಡ ಮುದ್ದಪ್ಪ, ಬಲ್ಯಮೀದೇರಿರ ದೇವಯ್ಯ ಗಣೇಶ್, ಬೊಳ್ಳಜಿರ ರಾಧ, ಮುಕ್ಕಾಟಿರ ಗಿರೀಶ್, ಮಲ್ಲಂಗಡ ದಿವಿನ್ ತಿಮ್ಮಯ್ಯ, ಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಿಲನ್ ಗಣಪತಿ, ರಾಜ ಪೊನ್ನಪ್ಪ ಸೇರಿದಂತೆ ಪ್ರಮುಖರಾದ ವಿಕ್ರಂ, ಮೋಹನ್, ಮುಂತಾದವರು ಉಪಸ್ಥಿತರಿದ್ದರು.