ಸೋಮವಾರಪೇಟೆ, ಆ. ೯: ಪುತ್ತೂರಿನ ಕಾವು ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಸೋಮವಾರಪೇಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಸಿ.ಕೆ. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ನೀತಿ ಬೋಧನೆ ಅಧಿಕಾರಿ ಡಾ. ಗೀತ್ ಪ್ರಕಾಶ್, ಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಪ್ರವೀಣ್ ರಾಮ್, ನೂತನ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಸೋಮವಾರಪೇಟೆಯ ಜೆ.ಸಿ. ಶೇಖರ್, ಲೀಲಾರಾಂ ಹಾಗೂ ಶಶಿಕಲಾ ಚೌಟ ಹಾಜರಿದ್ದರು.