ಮಡಿಕೇರಿ, ಆ. ೯: ಬೆಂಗಳೂರಿನ ಕೋರಮಂಗಲದಲ್ಲಿ ಜರುಗಿದ ೪೧ನೆಯ ರಾಜ್ಯಮಟ್ಟದ ಟೆಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿ ಪೊನ್ನಚೆಟ್ಟಿರ ಹರ್ಷ್ ಕರುಂಬಯ್ಯ ೧೮೦ ಅm ವಿಭಾಗದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯುವ ಸ್ಪರ್ಧೆಗೆ ಹರ್ಷ್ ಅರ್ಹತೆ ಪಡೆದಿದ್ದಾರೆ. ಮಡಿಕೇರಿಯ ಟೆಕ್ವಾಂಡೋ ಕ್ಲಬ್ನ ಕುಶಾಲ್ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಈತ, ೯ನೇ ತರಗತಿ ವಿದ್ಯಾರ್ಥಿಯಾಗಿದ್ದು, ಪೊನ್ನಚೆಟ್ಟಿರ ಮಿತ್ರ ಚಂಗಪ್ಪ ಹಾಗೂ ನಮೃತಾ ದಂಪತಿಯ ಪುತ್ರ.