*ಗೋಣಿಕೊಪ್ಪ, ಆ. ೯: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಮತ್ತು ಕ್ಯಾಲ್ಸ್ ಶಾಲೆ ಹಾಗೂ ಎನ್‌ಇಬಿ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆAಟ್ ಲಿಮಿಟೆಡ್ ಸಹಯೋಗದಲ್ಲಿ ಸೆಪ್ಟೆಂಬರ್ ೨೨ ರಂದು ೩ನೇ ವರ್ಷದ ರಾಷ್ಟçಮಟ್ಟದ ಮಾನ್ಸೂನ್ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ನಿರ್ದೇಶಕಿ ಅಶ್ವಿನಿ ನಾಚಪ್ಪ ತಿಳಿಸಿದ್ದಾರೆ.

ಸುಮಾರು ೩ ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸ್ಥಳೀಯರಿಗಾಗಿ ವಿಶೇಷವಾಗಿ ಆಯೋಜಿಸಿರುವ ೫ ಕಿ. ಮೀ. ವಿಭಾಗಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಹೆಚ್ಚಾಗಿ ಪಾಲ್ಗೊಳ್ಳಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶಾಲೆ ಆವರಣದಿಂದ ಪಾಲಿಬೆಟ್ಟ ಗಾಲ್ಫ್ ಮೈದಾನದವರೆಗೆ ಮ್ಯಾರಥಾನ್ ನಡೆಯಲಿದ್ದು, ೨೧.೧ ಕಿ. ಮೀ. ೧೦ ಕಿ. ಮೀ. ಮತ್ತು ೫ ಕಿ. ಮೀ. ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ೨೧.೧ ಮತ್ತು ೧೦ ಕಿ. ಮೀ. ವಿಭಾಗದಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ೫ ಕಿ. ಮೀ. ಮಜಾ ರನ್ ವಿಭಾಗವು ಸ್ಥಳೀಯರನ್ನು ಪ್ರೋತ್ಸಾಹಿಸಲು ಆಯೋಜಿಸಲಾಗಿದ್ದು, ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಕ್ಯಾಲ್ಸ್ ಶಾಲೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ಬೆಳಿಗ್ಗೆ ೬ ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಸ್ಪರ್ಧಿಗಳಿಗೆ ಟಿಶರ್ಟ್, ಮೆಡಲ್ಸ್ ಮತ್ತು ಉಪಹಾರ ನೀಡಲಾಗುತ್ತದೆ ಎಂದರು.

ನೋAದಣಿಗೆ (hಣಣಠಿs://ಟಿebsಠಿoಡಿಣs.iಟಿ/ಞoಜಚಿgu-moಟಿsooಟಿ-hಚಿಟಜಿ-mಚಿಡಿಚಿಣhoಟಿ/) , ೯೦೧೯೯೦೭೮೦೬, ೯೦೧೯೯೦೭೮೦೮ ಸಂಪರ್ಕಿಸಬಹುದು. ದೈಹಿಕ ಶಿಕ್ಷಣ ಶಿಕ್ಷಕ ಅಮ್ಮಂಡಿರ ಚೇತನ್ ಗೋಷ್ಠಿಯಲ್ಲಿದ್ದರು.