ಸೋಮವಾರಪೇಟೆ,ಆ.೯: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಪೈಸಾರಿ ಗ್ರಾಮದಲ್ಲಿ ನಡೆದ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವಾಟರ್ಮ್ಯಾನ್ ಹುಸೇನ್ ಅವರಿಗೆ ಸೋಮವಾರಪೇಟೆ-ಕುಶಾಲನಗರ ತಾಲೂಕು ನೀರು ನಿರ್ವಾಹಕರ ಸಂಘದ ವತಿಯಿಂದ ಆರ್ಥಿಕ ನೆರವು ಒದಗಿಸಲಾಯಿತು.
ಗಾಯಾಳುವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಂಘದ ಪದಾಧಿಕಾರಿಗಳು, ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸಿದರು. ಈ ಸಂದರ್ಭ ಸಂಘದ ಅಧ್ಯಕ್ಷ ಹೆಚ್.ಎನ್. ಶಂಕರ್, ಉಪಾಧ್ಯಕ್ಷ ಆಸಿಫ್, ಪ್ರಧಾನ ಕಾರ್ಯದರ್ಶಿ ಹೆಚ್.ಟಿ. ಶಶಿಕುಮಾರ್, ಪದಾಧಿಕಾರಿಗಳಾದ ಬಿ.ಆರ್. ವಸಂತ್, ಕೆ.ಪಿ. ಶಶಿಕುಮಾರ್ ಅವರುಗಳು ಹಾಜರಿದ್ದು, ನೆರವು ಹಸ್ತಾಂತರಿಸಿದರು.