ಮಡಿಕೇರಿ, ಆ. ೯ : ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದ ಎಫ್೭ ಗೋಣಿಕೊಪ್ಪಲು ಫೀಡರ್ನ ಹೊಸ ಲಿಂಕ್ಲೈನ್ ಕಾಮಗಾರಿ ಪ್ರಾರಂಭಿಸಬೇಕಿರುವ ಹಿನ್ನೆಲೆ ತಾ. ೧೦ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಈ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಗೋಣಿಕೊಪ್ಪ ಪಟ್ಟಣ, ಜೋಡುಬೀಟೆ, ಅರವತ್ತೋಕ್ಲು, ಕೈಕೇರಿ, ಹಾತೂರು, ಹೊಸಕೋಟೆ, ಕೆ.ಬೈಗೋಡು, ಕುಂದ, ಅತ್ತೂರು, ಹೊಸೂರು ಹಾಗೂ ಸುತ್ತಮುತ್ತಲ÷ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸೋಮವಾರಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವ ಹಿನ್ನೆಲೆ ತಾ. ೧೦ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೬ ಗಂಟೆಯವರೆಗೆ ಎಫ್೨ ಶಾಂತಳ್ಳಿ, ಎಫ್೩ ಐಗೂರು ಹಾಗೂ ಎಫ್೪ ಸೋಮವಾರಪೇಟೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.
ಸೋಮವಾರಪೇಟೆ ಪಟ್ಟಣ, ಚೌಡ್ಲು, ಹಾನಗಲ್ಲು, ನಗರೂರು, ಚಂದನಚುಕ್ಕಿ, ದುದ್ದಗಲ್ಲು, ಹಾನಗಲ್ಲು ಬಾಣೆ, ಗಾಂಧಿನಗರ, ಆಲೆಕಟ್ಟಿರಸ್ತೆ, ವಲ್ಲಭಾಯಿರಸ್ತೆ, ಬಸವೇಶ್ವರ ರಸ್ತೆ, ಶಾಂತಳ್ಳಿ, ಗೌಡಳ್ಳಿ, ಅಬ್ಬೂರುಕಟ್ಟೆ, ಐಗೂರು, ಸಜ್ಜಳ್ಳಿ, ಹೊಸತೋಟ, ಗರಗಂದೂರು, ಮೂಡುಗದ್ದೆ, ಭಟ್ಕನಳ್ಳಿ, ಕಾಜೂರು, ಗಿರಿವ್ಯಾಲಿ, ಕಂತಳ್ಳಿ, ಜೌತಳ್ಳಿ, ಯಡವಾರೆ, ಅಬ್ಬಿಮಠ, ಬಾಚಳ್ಳಿ, ವನಗೂರುಕೊಪ್ಪ, ಬಸವನಕೊಪ್ಪ, ನಗರಳ್ಳಿ, ಗೌರಿಕೆರೆ, ಕುಂದಳ್ಳಿ, ಹಂಚಳ್ಳಿ, ಮಲ್ಲಳ್ಳಿ, ಬೀದಳ್ಳಿ, ಹೆಗ್ಗಡಮನೆ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅನಿತಾ ಬಾಯಿ ತಿಳಿಸಿದ್ದಾರೆ.