ನವದೆಹಲಿ, ಆ. ೮: ಗಿನ್ನಿಸ್ ದಾಖಲೆ ಬರೆದ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಪ್ರತಿವರ್ಷ ಅನುದಾನದೊಂದಿಗೆ ಕ್ರೀಡಾಕೂಟಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯದೊಂದಿಗೆ ಶಾಶ್ವತ ಯೋಜನೆ ಕಲ್ಪಿಸಬೇಕೆಂದು ರಾಜ್ಯಸಭಾ ಸದಸ್ಯ ಅಜಯ್ ಮಕೆನ್ ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭಾ ಕಲಾಪದಲ್ಲಿ ಕ್ರೀಡಾ ಸಚಿವರನ್ನು ಒತ್ತಾಯಿಸಿದರು.
ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜನೆಯಿಂದ ಆದ ಸಕರಾತ್ಮಕ ಬದಲಾವಣೆ, ಕೊಡಗು ಜಿಲ್ಲೆ ಹಾಕಿ ಕ್ರೀಡೆಗೆ ನೀಡಿದ ಕೊಡುಗೆಯನ್ನು ಕೊಂಡಾಡಿದ ಅಜಯ್ ಮಕೆನ್ ‘ಕೊಡಗು ಹಾಕಿಯ ತೊಟ್ಟಿಲು’ ಎಂದು ಬಣ್ಣಿಸಿದರು.
ಕೊಡಗು ಜಿಲ್ಲೆಯಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವವು ಸರಕಾರದ ಸಹಾಯವಿಲ್ಲದೆ ನಡೆದು ಇದೀಗ ಗಿನ್ನಿಸ್ ದಾಖಲೆ ಮಾಡಿದೆ. ೧೯೯೭ರಲ್ಲಿ ೬೦ ಕೊಡವ ಕುಟುಂಬಗಳಿAದ ಆರಂಭಗೊAಡ ಹಾಕಿ ಪಂದ್ಯಾಟ ಇದೀಗ ೩೬೦ ಕುಟುಂಬಗಳು ಭಾಗವಹಿಸುವ ಮಟ್ಟಕ್ಕೆ ತಲುಪಿದೆ. ಇದರಲ್ಲಿ ೪,೮೩೪ ಆಟಗಾರರು ಆಟವಾಡಿರುವುದು ಹೆಗ್ಗಳಿಕೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಪಂದ್ಯಾಟ ಎಂದು ಶ್ಲಾಘಿಸಿದ ಅಜಯ್ ಮಕೆನ್, ಕೊಡಗು ಜಿಲ್ಲೆ ಭಾರತ ತಂಡಕ್ಕೆ ೫೦ ಕೊಡವ ಹಾಕಿಪಟುಗಳನ್ನು ಹಾಗೂ ೭ ಒಲಂಪಿಯನ್ಗಳನ್ನು ನೀಡಿದೆ. ತಾನು ಕ್ರೀಡಾ ಸಚಿವನಾಗಿ ಈ ಹಿಂದೆ ಕೆಲಸ ಮಾಡಿದ್ದು, ಕೊಡವ ಕೌಟುಂಬಿಕ ಹಾಕಿ ಉತ್ಸವ ಮೈದಾನಕ್ಕೆ ಮೂಲಭೂತ ಸೌಲಭ್ಯದೊಂದಿಗೆ ಒಂದು ಬಾರಿಯ ಶಾಶ್ವತ ಯೋಜನೆ ರೂಪಿಸುವುದರ ಜೊತೆಗೆ ವಾರ್ಷಿಕ ಅನುದಾನ ನೀಡುವ ಅವಕಾಶಗಳಿವೆ ಎಂದು ಗಮನ ಸೆಳೆದರು.
(ಮೊದಲ ಪುಟದಿಂದ) ಇದಕ್ಕೆ ಉತ್ತರಿಸಿದ ಕ್ರೀಡಾ ಸಚಿವೆ ರಕ್ಷಾ ನಿಖಿಲ್ ಖಡ್ಸೆ ಕೊಡವ ಹಾಕಿ ಗಿನ್ನಿಸ್ನಲ್ಲಿ ಸ್ಥಾನ ಪಡೆದಿದೆ. ಇದಕ್ಕೆ ಕೇಂದ್ರ ಸರಕಾರದಿಂದ ನೇರ ಅನುದಾನ ನೀಡಲು ಸಾಧ್ಯವಿಲ್ಲ. ರಾಜ್ಯ ಸರಕಾರದಿಂದ ಪ್ರಸ್ತಾವನೆ ಬಂದರೆ ನೀಡಲು ಅವಕಾಶವಿದೆ ಎಂದು ಮಾಹಿತಿ ಒದಗಿಸಿದರು. ಸಚಿವರ ಉತ್ತರದ ಕುರಿತು ಮಾತ ನಾಡಿದ ಅಜಯ್, ತಾನು ಕ್ರೀಡಾ ಸಚಿವನಾಗಿ ಕೆಲಸ ಮಾಡಿದ್ದೇನೆ. ಕೇಂದ್ರದಿAದ ನೇರ ಅನುದಾನ ನೀಡಬಹುದಾಗಿದೆ ಎಂದು ಪ್ರಸ್ತಾಪಿಸಿ ಕ್ರೀಡಾ ಕ್ಷೇತ್ರಕ್ಕೆ ಕೊಡಗು ಅಪಾರ ಕೊಡುಗೆ ನೀಡಿದ ಹಿನ್ನೆಲೆ ‘ಹೈ ಆಳ್ಟಿಟ್ಯೂಡ್ ಸ್ಪೋರ್ಟ್ಸ್ ಟ್ರೇನಿಂಗ್ ಸೆಂಟರ್’ ಕೊಡಗು ಜಿಲ್ಲೆ ಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಏನಿದು ‘ಹೈ ಆಳ್ಟಿಟ್ಯೂಡ್ ಸ್ಪೋರ್ಟ್ಸ್ ಟ್ರೇನಿಂಗ್ ಸೆಂಟರ್’?
ರಾಜ್ಯಸಭಾ ಸದಸ್ಯ ಅಜಯ್ ಮಕೆನ್, ಕೊಡಗು ಜಿಲ್ಲೆಯಲ್ಲಿ ‘ಹೈ ಆಳ್ಟಿಟ್ಯೂಡ್ ಸ್ಪೋರ್ಟ್ಸ್ ಟ್ರೇನಿಂಗ್ ಸೆಂಟರ್’ ಸ್ಥಾಪಿಸಲು ಒತ್ತಾಯಿಸಿದ್ದು, ಈ ರೀತಿ ತರಬೇತಿ ಕೇಂದ್ರ ಹಿಮಾಚಲ ಪ್ರದೇಶದಲ್ಲಿ ಹಾಗೂ ಕೇರಳದ ಮುನ್ನಾರ್ನಲ್ಲಿ ಮಾತ್ರ ಇದೆ.
ಸಮುದ್ರ ಮಟ್ಟಕ್ಕಿಂತ ಅತೀ ಎತ್ತರ ಹಾಗೂ ಗಾಳಿಯ ಸಾಂದ್ರತೆ ಕಡಿಮೆ ಇರುವ ಪ್ರದೇಶದಲ್ಲಿ ಕ್ರೀಡೆಗೆ ಪೂರಕ ವಾದ ತರಬೇತಿ ನೀಡಿ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಇದಾಗಿದ್ದು, ಇದರಿಂದ ಕ್ರೀಡಾಪಟು ಗಳು ಸಾಧನೆ ತೋರಲು ಪೂರಕವಾಗುತ್ತದೆ.