ಪ್ಯಾರಿಸ್, ಆ. ೮ : ರೋಚಕ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಸ್ಪೇಯ್ನ್ ತಂಡವನ್ನು ಮಣಿಸಿ ಕಂಚಿನ ಪದಕ ಪಡೆದು ಒಲಂಪಿಕ್ಸ್ ಹಾಕಿ ಇತಿಹಾಸದಲ್ಲಿ ಒಟ್ಟು ೧೩ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಸೆಮಿಫೈನಲ್ನಲ್ಲಿ ಜರ್ಮನಿ ವಿರುದ್ಧ ಪರಾಭವಗೊಂಡು ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತವಾಗಿದ್ದ ಭಾರತ, ಇಂದು ನಡೆದ ಕಂಚಿನ ಪದಕದ ಪಂದ್ಯದಲ್ಲಿ ೧೮ನೆ ನಿಮಿಷದಲ್ಲಿ ೧-೦ ಗೋಲು ಹಿಂದಿದ್ದರೂ ೩೦ ಹಾಗೂ ೩೩ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಹರ್ಮನ್ಪ್ರೀತ್ ಅವರ
ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತವಾಗಿದ್ದ ಭಾರತ, ಇಂದು ನಡೆದ ಕಂಚಿನ ಪದಕದ ಪಂದ್ಯದಲ್ಲಿ ೧೮ನೆ ನಿಮಿಷದಲ್ಲಿ ೧-೦ ಗೋಲು ಹಿಂದಿದ್ದರೂ ೩೦ ಹಾಗೂ ೩೩ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಹರ್ಮನ್ಪ್ರೀತ್ ಅವರ
(ಮೊದಲ ಪುಟದಿಂದ) ೨ ಗೋಲುಗಳಿಂದ ೨-೧ ಗೋಲುಗಳ ಗೆಲುವು ಸಾಧಿಸಿತು. ಕೊನೆಯ ನಿಮಿಷದಲ್ಲಿ ಸ್ಪೇಯ್ನ್ಗೆ ೪ ಪೆನಾಲ್ಟಿ ಕಾರ್ನರ್ಗಳು ಲಭಿಸಿದರೂ ಭಾರತದ ರಕ್ಷಣಾತ್ಮಕ ಆಟದಿಂದ ಹಾಗೂ ‘ದಿ ವಾಲ್' ಖ್ಯಾತಿಯ ಗೋಲ್ಕೀಪರ್ ಪಿ.ಆರ್ ಶ್ರೀಜೇಶ್ ಪ್ರಯತ್ನದಿಂದ ಗೋಲು ದಾಖಲಿಸುವುದರಿಂದ ಸ್ಪೇಯ್ನ್ ವಂಚಿತವಾಯಿತು.
ಶ್ರೀಜೇಶ್ ವಿದಾಯ
ಭಾರತ ಹಾಕಿ ತಂಡದ ಗೋಲ್ಕೀಪರ್ ಪಿ.ಆರ್ ಶ್ರೀಜೇಶ್ ಅವರ ಕೊನೆಯ ಅಂತರರಾಷ್ಟಿçÃಯ ಪಂದ್ಯ ಇದಾಗಿದ್ದು, ಭಾರತ ಕಂಚು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯ ಬಳಿಕ ಮೈದಾನದಲ್ಲಿ ಸಾಷ್ಟ್ಟಾಂಗ ನಮಸ್ಕರಿಸಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ಕ್ರೀಡೆಗೆ ನಿವೃತ್ತಿ ಹೇಳಿದ ಶ್ರೀಜೇಶ್ ತಮ್ಮ ಸಹ ಕ್ರೀಡಾಪಟುಗಳಿಂದಲೂ ಪ್ರಶಂಸೆಗೆ ಪಾತ್ರರಾದರು.
ಒಟ್ಟು ೧೩ ಪದಕಗಳು
ಒಲಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ೮ ಚಿನ್ನದ ಪದಕಗಳು (೧೯೨೮, ೧೯೩೨, ೧೯೩೬, ೧೯೪೮, ೧೯೫೨, ೧೯೫೬, ೧೯೬೪, ೧೯೮೦), ೪ ಕಂಚು (೧೯೬೮, ೧೯೭೨, ೨೦೨೦, ೨೦೨೪) ಹಾಗೂ ೧ ಬೆಳ್ಳಿ (೧೯೬೦) ದೊರಕಿದ್ದು, ಒಟ್ಟು ೧೩ ಪದಕಗಳನ್ನು ಜಯಿಸಿದೆ.
ಕುಸ್ತಿಗೆ ವಿನೇಶ್ ಫೋಗಾಟ್ ವಿದಾಯ
ಅಂತರರಾಷ್ಟಿçÃಯ ಕುಸ್ತಿಪಟು ೨೯ರ ಹರೆಯದ ವಿನೇಶ್ ಫೋಗಾಟ್ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ. ಕಳೆದ ಟೋಕ್ಯೋ ಒಲಂಪಿಕ್ಸ್ನಲ್ಲಿ ಮೊಣಕಾಲು ಗಾಯವಾಗಿ ಪಂದ್ಯಾವಳಿಯಿAದ ಹೊರಗುಳಿದ ವಿನೇಶ್, ಈ ಬಾರಿಯ ಒಲಂಪಿಕ್ಸ್ನಲ್ಲಿ ಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದ್ದರು. ಆದರೆ ನಿಗದಿತ ತೂಕಕ್ಕಿಂತ ೧೦೦ ಗ್ರಾಂ ಹೆಚ್ಚು ತೂಕವಿದ್ದ ಕಾರಣಕ್ಕೆ ಪಂದ್ಯಾಟದಿAದ ಇವರನ್ನು ಅಂತರರಾಷ್ಟಿçÃಯ ಒಲಂಪಿಕ್ಸ್ ಅಸೋಸಿಯೇಷನ್ ಅನರ್ಹ ಮಾಡಿ ಪದಕವೇ ಇಲ್ಲದಂತೆ ಮಾಡಿತು. ಈ ಬೆನ್ನಲ್ಲೆ ಇವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ತಮ್ಮ ಸುದೀರ್ಘ ೨೩ ವರ್ಷಗಳ ಕುಸ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.