ನಾಪೋಕ್ಲು, ಆ. ೮: ಪಿಕಪ್ ವಾಹನವೊಂದು ಇನ್ನೊಂದು ವಾಹನಕ್ಕೆ ಡಿಕ್ಕಿಪಡಿಸಿ ಬಳಿಕ ಅಂಗಡಿ ಒಂದಕ್ಕೆ ಗುದ್ದಿದ ಘಟನೆ ಸಮೀಪದ ಕಾರೆಕಾಡು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ನಾಪೋಕ್ಲು-ಕೊಟ್ಟಮುಡಿ ಮುಖ್ಯ ರಸ್ತೆಯಲ್ಲಿ ಕೇರಳದ ಮಾನಂದವಾಡಿಯಿAದ ಎಮ್ಮೆಮಾಡು ಗ್ರಾಮದತ್ತ ಬರುತ್ತಿದ್ದ ಪಿಕಪ್ ವಾಹನ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಬಳಿಕ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಟಿ.ಎ. ಮೊಹಮದ್ ಹನೀಫ್ ಅವರ ಅಂಗಡಿ ಕಟ್ಟಡಕ್ಕೆ ಗುದ್ದಿದ್ದು ನಷ್ಟ ಸಂಭವಿಸಿದೆ.

ಕಾರಿನಲ್ಲಿ ಐದು ಮಂದಿ ಪ್ರಯಾಣಿಕರಿದ್ದರು. ಚಾಲಕನಿಗೆ ಅಲ್ಪ ಪ್ರಮಾಣ ಗಾಯವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ೨ ವಾಹನಗಳಿಗೆ ಹಾನಿ ಉಂಟಾಗಿದೆ. ಪ್ರಕರಣದ ಬಗ್ಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.