ಮಡಿಕೇರಿ, ಆ. ೭: ಕಾಯಕಲ್ಪಕ್ಕೆ ಎದುರು ನೋಡುತ್ತಿದ್ದ ವೀರಾಜಪೇಟೆ ತಾಲೂಕು ಮೈದಾನ ಅಭಿವೃದ್ಧಿ ವಿಚಾರಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಸ್ಪಂದಿಸಿದ್ದು, ಮೊದಲ ಹಂತದಲ್ಲಿ ಮೈದಾನ ಸುತ್ತ ಮೆಶ್ ಅಳವಡಿಸುವ ಕಾರ್ಯ ಮುಕ್ತಾಯ ಕಂಡಿದ್ದು, ಕ್ರೀಡಾ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಅಂತರರಾಷ್ಟಿçಯ ಮಾಜಿ ರಗ್ಭಿ ಆಟಗಾರ ಮಾದಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಈ ಹಿಂದೆ ವೀರಾಜಪೇಟೆಯ ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ತಾಲೂಕು ಮೈದಾನವನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು.
ಎ.ಎಸ್ ಪೊನ್ನಣ್ಣನವರು ಶಾಸಕರಾಗಿ ಆಯ್ಕೆಯಾದ ನಂತರ ಮಾದಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕ್ರೀಡಾಪಟುಗಳು ತಾಲೂಕು ಮೈದಾನದಲ್ಲಿ ಮೆಶ್ ಮತ್ತು ಫ್ಲಡ್ಲೈಟ್ ಅಳವಡಿಕೆ ಮಾಡಬೇಕೆಂದು ಒತ್ತಾಯಿಸಿದ್ದರು. ಇದೀಗ ತಾಲೂಕು ಮೈದಾನದಲ್ಲಿ ಮೆಶ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಫ್ಲಡ್ಲೈಟ್ ಅಳವಡಿಕೆ ಕೆಲಸ ಕೂಡ ಆಗಲಿದೆ ಎಂದು ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದ್ದು, ಮೆಶ್ ಅಳವಡಿಕೆಯಿಂದ ಕ್ರೀಡಾಕೂಟ ಆಯೋಜಿಸುವ ಸಂದರ್ಭದಲ್ಲಿ ಆಯೋಜಕರಿಗೆ ದೊಡ್ಡ ಮಟ್ಟದ ಸಹಾಯವಾಗಲಿದೆ .ಅದಲ್ಲದೇ ಫ್ಲಡ್ಲೈಟ್ ಅಳವಡಿಕೆಯಿಂದ ರಾತ್ರಿ ವೇಳೆ ಕ್ರೀಡಾಕೂಟವನ್ನು ಆಯೋಜಿಸುವ ಸಂಘ-ಸAಸ್ಥೆಗಳಿಗೆ ಸಹಕಾರಿಯಾಗಲಿದೆ ಎಂಬುದು ಇಲ್ಲಿನ ಕ್ರೀಡಾಪ್ರೇಮಿಗಳ ಅಭಿಪ್ರಾಯವಾಗಿದೆ.