ಪೊನ್ನಂಪೇಟೆ, ಆ. ೭: ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ತೋರಿದ್ದಾರೆ.
ಗೋವಾದಲ್ಲಿ ನಡೆದ ರಾಷ್ಟçಮಟ್ಟದ ಥ್ರೋಬಾಲ್ ಪಂದ್ಯಾವಳಿಯ ಜೂನಿಯರ್ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಕದನೂರು ಗ್ರಾಮದ ಸಿ.ಕೆ. ಮುರುಳಿ ಮತ್ತು ಸ್ಮಿತಾ ದಂಪತಿ ಪುತ್ರಿ ಸಿ.ಎಂ. ಶ್ರೇಷ್ಠ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ೧೯ ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿ ಒಂಟಿಯAಗಡಿಯ ದಾಮೋದರ ಮತ್ತು ಶ್ರೀಷ ದಂಪತಿ ಪುತ್ರ ಕೆ.ಡಿ. ದಿನೇಶ್ ಮತ್ತು ಸುಬ್ರಮಣಿ ಮತ್ತು ಪ್ರಸನ್ನಕುಮಾರಿ ದಂಪತಿ ಪುತ್ರ ಟಿ.ಎಸ್. ಪ್ರೀತಮ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ೧೯ ವರ್ಷದೊಳಗಿನವರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪದ ಸುರೇಂದ್ರ ಮತ್ತು ಸಮೀಷ ದಂಪತಿ ಪುತ್ರ ದೀಕ್ಷಿತ್ ಸೂರ್ಯ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಶ್ರೇಷ್ಟ ಮತ್ತು ದೀಕ್ಷಿತ್ ಸೂರ್ಯ ತಾ. ೨೬ ರಿಂದ ೩೦ ರವರೆಗೆ ನೇಪಾಳದ ಪೊಕಾರದಲ್ಲಿ ನಡೆಯಲಿರುವ ಅಂತರಾಷ್ಟಿçÃಯ ಥ್ರೋಬಾಲ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಚೇತನ್ ಚಿಣ್ಣಪ್ಪ ತಿಳಿಸಿದ್ದಾರೆ.