ಗೋಣಿಕೊಪ್ಪಲು, ಆ. ೬: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಕ್ಯ ಗ್ರಾಮದ ಕಾಫಿ ತೋಟದ ಲೈನ್ ಮನೆಯ ಹಿಂಭಾಗದ ಸಗಣಿ ಗುಂಡಿಗೆ ಕಾಡಾನೆ ಬಿದ್ದು ಹೊರ ಬರಲಾರದೆ ಕೆಲಕಾಲ ಪರದಾಡಿದೆ. ಕಾಡಾನೆ ಗುಂಡಿಗೆ ಬಿದ್ದು ಹೊರ ಬರಲಾರದೆ ಒದ್ದಾಡುತ್ತಿರುವುದನ್ನು ಕಂಡ ತೋಟದ ರೈಟರ್ ವಸಂತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಆದರೆ, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಗುಂಡಿಯಿAದ ಮೇಲೆದ್ದು ಬಂದ ಆನೆ ಕಾಫಿ ತೋಟದೊಳಗೆ ಸೇರಿಕೊಂಡಿದೆ. ನಂತರ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಓಡಿಸಿದರು. ಈ ಸಂದರ್ಭ ಆರ್ಎಫ್ಓ ಗಂಗಾಧರ್, ಉಪ ವಲಯ ಅರಣ್ಯಾಧಿಕಾರಿ ದೇವರಾಜ್, ತಿತಿಮತಿ ಹಾಗೂ ಮತ್ತಿಗೋಡು ವನ್ಯಜೀವಿ ವಲಯದ ಸಿಬ್ಬಂದಿ ಹಾಜರಿದ್ದರು.