ಸುಂಟಿಕೊಪ್ಪ, ಆ. ೭: ಸಮೀಪದ ಚೆಟ್ಟಳ್ಳಿ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಹೆಚ್.ಟಿ. ಪೂವಯ್ಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಕೃಷಿ ಫಸಲನ್ನು ನಾಶಪಡಿಸಿದ್ದು, ಸುಮಾರು ೧ ಲಕ್ಷದ ೫೦ ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಿನಿAದ ಕಾಡಾನೆಗಳು ಈ ಭಾಗದಲ್ಲಿ ನಿರಂತರ ದಾಳಿ ಮಾಡುತ್ತಿವೆ. ಸೂಕ್ತ ಕ್ರಮ ಹಾಗೂ ಪರಿಹಾರಕ್ಕೆ ಒತ್ತಾಯಿಸಿರುವ ಪೂವಯ್ಯ, ಅಧಿಕಾರಿಗಳ ನಿರ್ಲಕ್ಷö್ಯದ ವಿರುದ್ಧ ಕಿಡಿಕಾರಿದ್ದಾರೆ.