ಕುಶಾಲನಗರ, ಆ. ೭: ವಿಶ್ವ ಅಂಗದಾನ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಶಾಲನಗರ ತಾಲೂಕು ಘಟಕ ಮತ್ತು ಕುಶಾಲನಗರ ರೋಟರಿ ಜಂಟಿ ಆಶ್ರಯದಲ್ಲಿ ತಾ. ೮ ರಂದು (ಇಂದು) ತಜ್ಞರಿಂದ ಅರಿವು ಮಾಹಿತಿ, ಅಂಗಾAಗ ದಾನಿಗಳ ನೋಂದಣಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ರೆಡ್ಕ್ರಾಸ್ ತಾಲೂಕು ಅಧ್ಯಕ್ಷ ಎಸ್.ಕೆ. ಸತೀಶ್ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂಗಾAಗಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ದಾನಿಗಳು ಮುಂದೆ ಬರಬೇಕಾಗಿದೆ. ಈ ಸಂಬAಧ ಕುಶಾಲನಗರ ರೋಟರಿ ಸಭಾಂಗಣದಲ್ಲಿ ತಾ. ೮ ರಂದು (ಇಂದು) ನಡೆಯುವ ಕಾರ್ಯಾಗಾರದಲ್ಲಿ ಅಂಗಾAಗ ದಾನಿಗಳ ನೋಂದಾವಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಓರ್ವ ವ್ಯಕ್ತಿ ತನ್ನ ಪ್ರಮುಖ ಅಂಗಗಳನ್ನು ದಾನ ಮಾಡಿದಲ್ಲಿ ಕನಿಷ್ಟ ಎಂಟು ಜೀವ ಉಳಿಯಲು ಸಾಧ್ಯ ಎಂದ ಅವರು ಹೃದಯ, ಕಣ್ಣು, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಮತ್ತು ಕರುಳು ದಾನ ಮಾಡಲು ಅವಕಾಶವಿದೆ ಎಂದರು.
ಈ ಸಂದರ್ಭ ರೋಟರಿ ಕುಶಾಲನಗರದ ಅಧ್ಯಕ್ಷ ಸಿ.ಬಿ. ಹರೀಶ್, ಮಹೇಶ್ ನಾಲ್ವಡೆ, ರೆಡ್ಕ್ರಾಸ್ ಸಂಸ್ಥೆಯ ನಂಜುAಡಸ್ವಾಮಿ, ಕೆ.ಎನ್. ದೇವರಾಜು, ಚಂದ್ರು ಇದ್ದರು.