ಪ್ಯಾರಿಸ್, ಆ. ೭: ನಿನ್ನೆಯಷ್ಟೆ ಕ್ಯೂಬಾದ ಲೋಪೆಜ್ ಅವರನ್ನು ಒಲಂಪಿಕ್ಸ್ ಮಹಿಳೆಯರ ೫೦ ಕೆ.ಜಿ ಫ್ರೀಸ್ಟೆöÊಲ್ ಕುಸ್ತಿ ಸೆಮಿಫೈನಲ್ ಪಂದ್ಯದಲ್ಲಿ ಮಣಿಸಿ ಅಂತಿಮ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಭಾರತದ ವಿನೇಶ್ ಫೋಗಾಟ್ ಅವರು ನಿಗದಿತಕ್ಕಿಂತ ಕೇವಲ ೧೦೦ ಗ್ರಾಂ ಅಧಿಕ ತೂಕವಿರುವ ಕಾರಣ ಅಂತಿಮ ಪಂದ್ಯದಲ್ಲಿ ಭಾಗವಹಿಸಲು ಅನರ್ಹರಾಗಿದ್ದಾರೆ. ವಿನೇಶ್ ಅವರು ಈ ಹಿಂದಿನ ಹಲವಾರು ಕ್ರೀಡಾಕೂಟಗಳಲ್ಲಿ ೫೩ ಕೆ.ಜಿ ವಿಭಾಗದಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಒಲಂಪಿಕ್ಸ್ನಲ್ಲಿ ತಮ್ಮ ತೂಕವನ್ನು ಇಳಿಸಿ ೫೦ ಕೆ.ಜಿ ವಿಭಾಗದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಒಲಂಪಿಕ್ಸ್ ಕುಸ್ತಿಯಲ್ಲಿ ಪೈನಲ್ ತಲುಪಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡು ಪದಕ ಗೆಲ್ಲುವುದನ್ನು ಖಚಿತಪಡಿಸಿಕೊಂಡಿದ್ದರು. ಅಂತಿಮ ಪಂದ್ಯದಲ್ಲಿ ಗೆದ್ದರೆ ಚಿನ್ನ ಹಾಗೂ ಸೋತರೆ ಕನಿಷ್ಟ ಬೆಳ್ಳಿಯಾದರೂ ದೊರಕುತ್ತಿತ್ತು. ಪಂದ್ಯಾವಳಿ ತಾ. ೭ ರಂದು ರಾತ್ರಿ ೯:೪೫ ರ ನಂತರ ನಡೆಯಬೇಕಿತ್ತು. ಆದರೆ ತಾ.೭ ರ ಬೆಳಿಗ್ಗೆ ಅಂತರರಾಷ್ಟಿçÃಯ ಒಲಂಪಿಕ್ಸ್ ಸಂಸ್ಥೆ ವತಿಯಿಂದ ನಡೆದ ತೂಕ ಪರಿಶೀಲನೆ ಸಂದರ್ಭ
(ಮೊದಲ ಪುಟದಿಂದ) ಫೋಗಾಟ್ ಅವರ ತೂಕ ೫೦ಕೆ.ಜಿ ೧೦೦ ಗ್ರಾಂ ಇದ್ದುದಾಗಿ ತಿಳಿದು ಬಂದಿದೆ.
ಕ್ರೀಡಾಕೂಟ ಪ್ರಾರಂಭವಾದ ೨ನೆ ದಿನವೇ ಅವರ ತೂಕ ಸ್ವಲ್ಪ ಹೆಚ್ಚಿತ್ತು. ತೂಕವನ್ನು ೫೦ಕೆ.ಜಿಗೆ ಇಳಿಸಲು ಅವರು ಆಹಾರ ಸೇವನೆಯನ್ನು ನಿಯಂತ್ರಿಸಿ, ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುವುದ ರೊಂದಿಗೆ ತಮ್ಮ ಕೂದಲನ್ನೂ ಕತ್ತರಿಸಿದ್ದರು. ಆದಾಗ್ಯೂ ಕೂದಲೆಳೆಯ ಅಂತರದಿAದ ತೂಕ ಹೆಚ್ಚಿದ್ದ ಕಾರಣ ತಾ.೭ರ ಬೆಳಿಗ್ಗೆ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ ಅಂತರರಾಷ್ಟ್ರೀಯ ಒಲಂಪಿಕ್ಸ್ ಅಸೋಸಿಯೇಷನ್, ಅವರನ್ನು ಪಂದ್ಯಾವಳಿಯಿAದ ಅನರ್ಹ ಮಾಡಿ ಆದೇಶಿಸಿದೆ. ತೂಕ ಇಳಿಸಲು ಇನ್ನೂ ಕೆಲ ಸಮಯ ನೀಡಬೇಕೆಂಬ ಭಾರತೀಯ ಒಲಂಪಿಕ್ಸ್ ಅಸೋಸಿಯೇಷನ್ನ ಮನವಿಯನ್ನು ನಿರಾಕರಿಸಲಾಗಿದ್ದು, ಫೋಗಾಟ್ ಸೇರಿದಂತೆ ಕೋಟ್ಯಂತರ ಕ್ರೀಡಾಪ್ರೇಮಿಗಳಿಗೆ ಆಘಾತ ಉಂಟಾಗಿದೆ.
ನೀರಜ್ಗೆ ಮತ್ತೆ ಚಿನ್ನ ಗೆಲ್ಲುವ ಅವಕಾಶ
ಕಳೆದ ಒಲಂಪಿಕ್ಸ್ನಲ್ಲಿ ಜಾವಲಿನ್ ಥ್ರೋನಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಂಪಿಕ್ಸ್ ಟ್ರಾö್ಯಕ್ ಆ್ಯಂಡ್ ಫೀಲ್ಡ್ ಪಂದ್ಯಗಳಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿದ್ದ ನೀರಜ್ ಚೋಪ್ರಾ ಅವರು ಈ ಬಾರಿಯೂ ಚಿನ್ನ ತೆಗೆಯುವ ಸಾಧ್ಯತೆ ಹೆಚ್ಚಿದೆ. ತಾ.೬ರಂದು ನಡೆದ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಗಳಿಸಿ ಫೈನಲ್ ಸುತ್ತಿಗೆ ಚೋಪ್ರಾ ಅವರು ಅರ್ಹರಾಗಿದ್ದಾರೆ. ತಾ.೮ರಂದು (ಇಂದು) ರಾತ್ರಿ ೧೧:೫೫ಕ್ಕೆ ಪೈನಲ್ ಸುತ್ತು ಆರಂಭವಾಗಲಿದೆ.
ಭಾರತಕ್ಕೆ ಸ್ಪೇಯ್ನ್ ಸವಾಲು
ಪ್ಯಾರಿಸ್ ಒಲಂಪಿಕ್ಸ್ ಹಾಕಿ ಸೆಮಿಫೈನಲ್ನಲ್ಲಿ ಜರ್ಮನಿ ವಿರುದ್ಧ ರೋಚಕ ಪಂದ್ಯದಲ್ಲಿ ೨-೩ ಗೋಲುಗಳಿಂದ ಸೋತ ಭಾರತವು, ಇಂದು (ತಾ.೮ರಂದು) ಸ್ಪೇಯ್ನ್ ವಿರುದ್ಧ ಕಂಚಿನ ಪದಕದ ಪಂದ್ಯದಲ್ಲಿ ಆಡಲಿದೆ. ಪಂದ್ಯಾವಳಿ ಸಂಜೆ ೫:೩೦ಕ್ಕೆ ಪ್ರಾರಂಭವಾಗಲಿದೆ.