ಸೋಮವಾರಪೇಟೆ, ಆ. ೭: ವ್ಯಾಪಾರ ವಹಿವಾಟು ಮುಗಿಸಿ ನಗದು ಹಣದೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ರಸ್ತೆ ತಡೆದು, ಕಣ್ಣಿಗೆ ಖಾರದ ಪುಡಿ ಎರಚಿ ರೂ. ೬.೧೮ ಲಕ್ಷ ಹಣವನ್ನು ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸರು ಒಟ್ಟು ಏಳು ಮಂದಿ ಖದೀಮರನ್ನು ಬಂಧಿಸಿದ್ದಾರೆ.

ಇದರಲ್ಲಿ ನಾಲ್ವರು ಅಂತರ್ ಜಿಲ್ಲಾ ದರೋಡೆಕೋರರಾಗಿದ್ದರೆ, ಮೂವರು ಖದೀಮರು ಕೊಡಗಿನವ ರಾಗಿದ್ದಾರೆ. ಅಂತರ್ ಜಿಲ್ಲಾ ದರೋಡೆಕೋರರೊಂದಿಗೆ ಸಂಪರ್ಕ ಸಾಧಿಸಿ ಜಿಲ್ಲೆಯಲ್ಲಿ ದರೋಡೆಗೆ ಇಳಿದ ಮೂವರ ಸಹಿತ ಒಟ್ಟು ೭ ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದರೋಡೆ ಪ್ರಕರಣದಲ್ಲಿ ಭಾಗಿಯಾದ ಜಿಲ್ಲೆಯ ವೀರಾಜಪೇಟೆ ತಾಲೂಕಿನ ಶಿವಕೇರಿ ಗ್ರಾಮ ನಿವಾಸಿ, ಅರ್ಚಕ ವೃತ್ತಿಯಲ್ಲಿರುವ ಸೂರ್ಯಪ್ರಸಾದ್ ಬಿ.ಎ. (೪೩), ಸೋಮವಾರಪೇಟೆ ಪಟ್ಟಣದ ವೆಂಕಟೇಶ್ವರ ಬ್ಲಾಕ್ ನಿವಾಸಿ, ಸಿಲ್ವರ್ ಮರ ವ್ಯಾಪಾರಿ ಹೆಚ್.ಪಿ. ವಿನೋದ್ ಕುಮಾರ್ (೩೬), ಹೆಬ್ಬಾಲೆ ಗ್ರಾಮದ ಕೂಲಿ ಕಾರ್ಮಿಕ ಬಿ. ಮೋಹನ್ ಕುಮಾರ್ (೪೫) ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಕುದುಮಾರು ಗ್ರಾಮದ ಚಾಲಕ ರೋಷನ್ ಕೆ. (೩೨), ಕನ್ಯಾನ ಗ್ರಾಮದ ನಿವಾಸಿ, ವ್ಯವಸಾಯ ಕೆಲಸ ಮಾಡಿಕೊಂಡಿರುವ ಸತೀಶ್ ರೈ (೫೪), ವಿಟ್ಲ-ಪಡೂರು ಗ್ರಾಮದ ನಿವಾಸಿ ಪೈಂಟಿAಗ್ ಕೆಲಸ ಮಾಡಿಕೊಂಡಿರುವ ಕೆ. ಗಣೇಶ (೨೮) ವೀರಕಂಬ ಗ್ರಾಮದ ಕೂಲಿ ಕಾರ್ಮಿಕ ಕುಸುಮಾಕರ (೩೯) ಅವರುಗಳನ್ನು ಬಂಧಿಸಲಾಗಿದೆ.

ಘಟನೆಯ ಹಿನ್ನೆಲೆ : ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿಬ್ಬೆಟ್ಟ ಗ್ರಾಮದ ನಿವಾಸಿ, ಪಟ್ಟಣದಲ್ಲಿ ವ್ಯಾಪಾರೋದ್ಯಮ ನಡೆಸುತ್ತಿರುವ ಕೆ.ಎಂ. ನೇಮರಾಜ್ ಅವರು ತಮ್ಮ ಪತ್ನಿಯೊಂದಿಗೆ ಜು. ೨೯ ರಂದು ರಾತ್ರಿ ೮.೪೫ ಗಂಟೆಗೆ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ಕಿಬ್ಬೆಟ್ಟ ರಸ್ತೆಯಲ್ಲಿರುವ ಸಾಕ್ಷಿ ಕನ್ವೆನ್‌ಷನ್ ಹಾಲ್‌ನಿಂದ ೨೦೦ ಮೀಟರ್ ದೂರದ ರಸ್ತೆಯ ತಿರುವಿನಲ್ಲಿ ಅಪರಿಚಿತ ವ್ಯಕ್ತಿಗಳು ಕಾರು ಮತ್ತು ಬೈಕಿನಲ್ಲಿ ಬಂದು ಅಡ್ಡಗಟ್ಟಿದ್ದರು.

ಈ ಸಂದರ್ಭ ನೇಮರಾಜ್ ಅವರ ಮುಖಕ್ಕೆ ಖಾರದ ಪುಡಿ ಎರಚಿ ಸ್ಕೂಟರ್‌ನಿಂದ ಬೀಳಿಸಿದ್ದು, ಪತ್ನಿ ಆಶಾ ಅವರ ಮೇಲೆ ಹಲ್ಲೆ ಮಾಡಿ ನಗದು ರೂ. ೬.೧೮ ಲಕ್ಷ, ೩ ಮೊಬೈಲ್ ಪೋನ್‌ಗಳಿದ್ದ ಬ್ಯಾಗ್‌ನ್ನು ದರೋಡೆ ಮಾಡಿದ್ದರು.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ೩೧೦(೨) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನವೇ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಡಿಎಸ್‌ಪಿ ಆರ್.ವಿ. ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಾದೇವ, ಗೋಪಾಲ ಸೇರಿದಂತೆ ಸಿಬ್ಬಂದಿಗಳು

(ಮೊದಲ ಪುಟದಿಂದ) ಹಾಗೂ ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾö್ಯಧಾರಗಳನ್ನು ಕಲೆ ಹಾಕಿತ್ತು.

ಇದರೊಂದಿಗೆ ಡಿಎಸ್‌ಪಿ ಗಂಗಾಧರಪ್ಪ ಅವರ ಉಸ್ತುವಾರಿಯಲ್ಲಿ ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿಗಳೊAದಿಗೆ ಇತರ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡAತೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಹಗಲಿರುಳೂ ತನಿಖೆ ನಡೆಸಿದ ಸಿಬ್ಬಂದಿಗಳು ಅಂತಿಮವಾಗಿ ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಪರಾಧ ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಹಾಗೂ ಮಾರುತಿ ಸ್ವಿಫ್ಟ್ ಕಾರು ಸೇರಿದಂತೆ ೯ ಮೊಬೈಲ್‌ಗಳು ಮತ್ತು ರೂ. ೩,೦೨,೦೦೦ ನಗದನ್ನು ಆರೋಪಿ ಗಳಿಂದ ವಶಪಡಿಸಿ ಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾ ಗಿರುವ ಆರೋಪಿಗಳಾದ ರೋಷನ್, ಸತೀಶ್ ರೈ, ಗಣೇಶ, ಕುಸುಮಾಕರ ಅವರುಗಳು ಅಂತರ್ ಜಿಲ್ಲಾ ದರೋಡೆಕೋರರಾಗಿದ್ದು, ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೊಲೆ ಪ್ರಯತ್ನ, ಅಪಹರಣ ಸೇರಿದಂತೆ ಇನ್ನಿತರ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಯಲ್ಲಿ ಇವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ. ೨೦೨೨ರಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿಯೂ ಇವರುಗಳು ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸದರಿ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿದ್ದು, ವಿಶೇಷ ತನಿಖಾ ತಂಡದಿAದ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಪಟ್ಟಣದ ಅನತಿ ದೂರದಲ್ಲಿ ನಡೆದ ದರೋಡೆ ಪ್ರಕರಣದಿಂದಾಗಿ ಸಾರ್ವಜನಿಕ ವಲಯದಲ್ಲಿ ಭಯ ಸೃಷ್ಟಿಸಿತ್ತು. ವರ್ತಕ ವರ್ಗದಲ್ಲಿ ತೀವ್ರ ಆತಂಕಕ್ಕೂ ಕಾರಣವಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂದಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಘಟನೆ ನಡೆದು ೮ ದಿನದಲ್ಲಿಯೇ ಪ್ರಕರಣವನ್ನು ಭೇದಿಸಿ ಆರೋಪಿ ಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತನಾಗಿರುವ ವೆಂಕಟೇಶ್ವರ ಬ್ಲಾಕ್‌ನ ಸಿಲ್ವರ್ ಮರ ವ್ಯಾಪಾರಿ ಹೆಚ್.ಪಿ. ವಿನೋದ್ ಕುಮಾರ್ ಕೃತ್ಯಕ್ಕೆ ಬಳಸಿದ ವಾಹನದ ಡೀಲರ್ ಆಗಿದ್ದಾನೆ ಎಂದು ಎಫ್.ಐ.ಆರ್.ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಈ ಘಟನೆ ನಡೆದ ದಿನವೇ ಕಾಗಡಿಕಟ್ಟೆಯಲ್ಲಿರುವ ಅಂಗಡಿ ಯೊಂದರಲ್ಲಿಯೂ ಕಳ್ಳತನ ನಡೆದಿದ್ದು, ರೂ. ೧೦ ಸಾವಿರ ನಗದು ಕಳವು ಮಾಡಲಾಗಿದೆ. ಈ ಪ್ರಕರಣದ ತನಿಖೆಯೂ ಪ್ರಗತಿಯಲ್ಲಿದ್ದು, ಬಹುತೇಕ ಆರೋಪಿಗಳು ಸೋಮವಾರಪೇಟೆಯ ಸ್ಥಳೀಯರೇ ಆಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.