ಪೊನ್ನಂಪೇಟೆ, ಆ. ೬: ಪೊನ್ನಂಪೇಟೆ ತಾಲೂಕಿನ ಕಾನೂರು-ಕುಟ್ಟ ರಸ್ತೆಯ ಕೇಂಬುಕೊಲ್ಲಿ ಎಂಬಲ್ಲಿ ಬಿ.ಕುಟ್ಟಪ್ಪ ಎಂಬವರ ಮನೆಯ ಮುಂಭಾಗ ರಸ್ತೆಯಲ್ಲಿ ಹಾಡಹಗಲೇ ೪ ಕಾಡಾನೆಗಳು ಮತ್ತು ೩ ಮರಿಯಾನೆಗಳು ರಸ್ತೆ ದಾಟುತ್ತಿದ್ದ ಸಂದರ್ಭ ಗುಂಪಿನಿAದ ಬಂದ ಕಾಡಾನೆಯೊಂದು ಮಾರುತಿ ವ್ಯಾನ್ ಮೇಲೆ ದಾಳಿ ನಡೆಸಿದೆ.

ರಸ್ತೆಯಲ್ಲಿ ಸಾಗುತ್ತಿದ್ದ ಮುಕ್ಕಾಟಿರ ಮಧು ಎಂಬವರ ಮಾರುತಿ ವ್ಯಾನ್‌ಅನ್ನು ಅಡ್ಡ ಹಾಕಿ ಮುಂಭಾಗಕ್ಕೆ ಗುದ್ದಿದ ಪರಿಣಾಮ ವಾಹನದ ಗಾಜು ಒಡೆದು ಹೋಗಿದ್ದು, ವಾಹನ ಜಖಂಗೊAಡಿದೆ. ರಸ್ತೆಯಲ್ಲಿ ಹಿಂಬದಿಯಿAದ ಬರುತ್ತಿದ್ದ ವಾಹನಗಳ ಸದ್ದು ಕೇಳಿ ಆನೆಗಳು ಕಾರನ್ನು ಬಿಟ್ಟು ತೋಟದೊಳಗೆ ಸೇರಿಕೊಂಡಿವೆ. ವಾಹನದೊಳಗೆ ಇದ್ದವರು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಘಟನೆ ಸ್ಥಳಕ್ಕೆ ನಾಗರಹೊಳೆ ಅರಣ್ಯ ವಲಯಾಧಿಕಾರಿ ಮಹಮದ್ ಜಿಷನ್, ಉಪ ವಲಯ ಅರಣ್ಯಾಧಿಕಾರಿ ಚೇತನ್ ಕುಮಾರ್ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ.