ಕಣಿವೆ, ಆ. ೬: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬAಧಪಟ್ಟAತೆ ವ್ಯಾಪಕ ಮಳೆಯಿಂದಾಗಿ ಉಂಟಾಗಿರುವ ಅಪಾರ ನಷ್ಟ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ವಿಶೇಷ ಅನುದಾನಕ್ಕಾಗಿ ಶಾಸಕ ಡಾ.ಮಂತರ್ ಗೌಡ ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಸುಧೀರ್ಘವಾಗಿ ಚರ್ಚಿಸಿದರು.
ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಡಾ.ಮಂತರ್ಗೌಡ, ಮುಖ್ಯಮಂತ್ರಿ ಕೊಡಗು ಜಿಲ್ಲಾ ಪ್ರವಾಸಕ್ಕೆ ಬಂದಾಗ ಮಳೆಹಾನಿಯ ಸಮಸ್ಯೆಗಳನ್ನು ವಿವರಿಸಲಾಗಿತ್ತು.
ರಸ್ತೆಗಳು, ಸೇತುವೆಗಳು, ಮನೆ ಹಾಗೂ ಬೆಳೆ ಹಾನಿ ಕುರಿತು ತಿಳಿಸಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಗೊಳಿಸುವಂತೆ ಕೋರಲಾಯಿತು.
ಹಾಗೆಯೇ ಕೆಆರ್ಎಸ್ ಅಣೆಕಟ್ಟು ತುಂಬಲು ಕಾರಣವಾದ ಕೊಡಗಿನ ಕಾವೇರಿ ತವರಿನ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡಬೇಕೆಂದು ಕೋರಿದ್ದಾಗಿ ಡಾ. ಮಂತರ್ ಗೌಡ ತಿಳಿಸಿದರು.
ಹಾಗೆಯೇ ಉಪಮುಖ್ಯಮಂತ್ರಿ ಗಳನ್ನು ಭೇಟಿಯಾಗಿ ಜಲಸಂಪನ್ಮೂಲ ಇಲಾಖೆಗೆ ಸಂಬAಧಿಸಿದAತೆ ಪ್ರತ್ಯೇಕ ಅನುದಾನವನ್ನು ಕೇಳಿದ್ದಾಗಿ ಅವರು ವಿವರಿಸಿದರು.
ಈಗಾಗಲೇ ರೂ. ೫೦ ಕೋಟಿ ವೆಚ್ಚದಲ್ಲಿ ಮೊದಲ ಹಂತದ ಹಾರಂಗಿ ಮುಖ್ಯ
(ಮೊದಲ ಪುಟದಿಂದ) ಕಾಲುವೆಯನ್ನು ಅಭಿವೃದ್ಧಿ ಮಾಡಲಾಗಿದೆ. ಮುಂದುವರೆದು ರೂ. ೭೨ ಕೋಟಿ ವೆಚ್ಚದ ಟೆಂಡರ್ ಪೂರ್ಣಗೊಂಡಿದೆ. ಅದನ್ನು ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಿದ ನಂತರ ಮಾಡಲಾಗುವುದು.
ಮಳೆ ನಿಂತ ಮೇಲೆ ಹದಗೆಟ್ಟ ರಸ್ತೆಗಳ ಪುನಶ್ಚೇತನ ಕಾಮಗಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ವರದಿ : ಕೆ.ಎಸ್. ಮೂರ್ತಿ