ಸೋಮವಾರಪೇಟೆ, ಆ. ೬: ಸ್ಕೂಟರ್ ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ ಬರೋಬ್ಬರಿ ೬.೧೮ ಲಕ್ಷ ಹಣವನ್ನು ದರೋಡೆ ಮಾಡಿದ ಕೃತ್ಯಕ್ಕೆ ಸಂಬAಧಿಸಿದAತೆ ಪೊಲೀಸರು ಅಂತರ್ ಜಿಲ್ಲಾ ಖದೀಮರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಳೆದ ಜು.೨೯ ರಂದು ರಾತ್ರಿ ಕಿಬ್ಬೆಟ್ಟ ಗ್ರಾಮ ನಿವಾಸಿ, ಪಟ್ಟಣದಲ್ಲಿ ವ್ಯಾಪಾರ ಉದ್ದಿಮೆ ನಡೆಸುತ್ತಿರುವ ನೇಮರಾಜ್ ಹಾಗೂ ಪತ್ನಿ ಆಶಾ ಅವರುಗಳು ತಮ್ಮ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ, ಕಿಬ್ಬೆಟ್ಟ ರಸ್ತೆಯ ಸಾಕ್ಷಿ ಕನ್ವೆನ್‌ಷನ್ ಸಭಾಂಗಣದಿAದ ೨೦೦ ಮೀಟರ್ ದೂರದಲ್ಲಿ ಅಪರಿಚಿತ ದುಷ್ಕರ್ಮಿಗಳ ತಂಡ ದರೋಡೆ ನಡೆಸಿತ್ತು.

ಸ್ಕೂಟರ್‌ಗೆ ಕಾರನ್ನು ಅಡ್ಡ ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ, ಪತ್ನಿ ಆಶಾ ಅವರ ಮೇಲೆ ಹಲ್ಲೆ ಮಾಡಿ ಬ್ಯಾಗ್‌ನಲ್ಲಿಟ್ಟಿದ್ದ ರೂ. ೬.೧೮ ಲಕ್ಷ ನಗದು ಸೇರಿದಂತೆ ಮೊಬೈಲ್‌ಗಳನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ನೇಮರಾಜ್ ಹಾಗೂ ಪತ್ನಿ ಆಶಾ ಅವರುಗಳ ಮೇಲೆ ಹಲ್ಲೆ ನಡೆಸಿ, ಹಣವನ್ನು ದರೋಡೆ ಮಾಡಿದ ನಂತರ ಆರೋಪಿಗಳು ಕಿಬ್ಬೆಟ್ಟ ರಸ್ತೆಯ ಮೂಲಕ ಸೋಮವಾರಪೇಟೆ ಪಟ್ಟಣಕ್ಕೆ ಬಂದು ನಾಪತ್ತೆಯಾಗಿದ್ದರು.

(ಮೊದಲ ಪುಟದಿಂದ) ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಡಿವೈಎಸ್‌ಪಿ ಗಂಗಾಧರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರುಗಳು ಅಂದು ರಾತ್ರಿಯೇ ಸೋಮವಾರಪೇಟೆಗೆ ಆಗಮಿಸಿ ಕೃತ್ಯದ ಬಗ್ಗೆ ಮಾಹಿತಿ ಪಡೆದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಅಪರಾಧ ಪತ್ತೆ ದಳದ ನುರಿತ ಸಿಬ್ಬಂದಿಗಳ ಸಹಿತ ಪೊಲೀಸರ ತಂಡ ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಇದೀಗ ಒಟ್ಟು ೫ ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೃತ್ಯದಲ್ಲಿ ಅಂತರ್ ಜಿಲ್ಲಾ ಖದೀಮರು ಭಾಗಿಯಾಗಿರುವ ಬಗ್ಗೆಯೂ ತಿಳಿದುಬಂದಿದ್ದು, ಪೊಲೀಸರು ಹೊರ ಜಿಲ್ಲೆಗಳಿಗೆ ತೆರಳಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ವಶಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.

ದರೋಡೆ ನಡೆದ ದಿನವೇ ಕಾಗಡಿಕಟ್ಟೆಯಲ್ಲಿಯೂ ಒಂದು ಅಂಗಡಿಗೆ ನುಗ್ಗಿ ೧೦ ಸಾವಿರ ಹಣವನ್ನು ಕಳ್ಳರು ಅಪಹರಿಸಿರುವ ಘಟನೆಯೂ ನಡೆದಿದ್ದು, ಈ ಕೃತ್ಯಕ್ಕೆ ಸಂಬAಧಿಸಿದAತೆಯೂ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.