ಪ್ಯಾರಿಸ್, ಆ. ೬ : ಕಳೆದ ಒಲಂಪಿಕ್ಸ್ನಲ್ಲಿನ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲು ಗಾಯದಿಂದಾಗಿ ಪರಾಭವU ೆÆಂಡಿದ್ದ ಕುಸ್ತಿಪಟು ವಿನೇಶ್ ಫೋಗಾಟ್ ಮೊಣಕಾಲು ಶಸ್ತçಚಿಕಿತ್ಸೆ ಬಳಿಕ ತೀವ್ರ ಶ್ರಮದಿಂದ ಕ್ರೀಡೆಯತ್ತ ಮತ್ತೆ ಮುಖಮಾಡಿ ಒಲಂಪಿಕ್ಸ್ ಫೈನಲ್ ತಲುಪಿ ಅತ್ಯದ್ಭುತ ಸಾಧನೆಗೈದಿದ್ದಾರೆ. ಇಂದು ನಡೆದ ಪ್ಯಾರಿಸ್ ಒಲಂಪಿಕ್ಸ್ ಮಹಿಳೆಯರ ೫೦ ಕೆ.ಜಿ ಫ್ರೀಸ್ಟೆöÊಲ್ ವಿಭಾಗದಲ್ಲಿನ ಸೆಮಿಫೈನಲ್‌ನಲ್ಲಿ ಕ್ಯೂಬಾ ದೇಶದ ಗುಝ್ಮಾನ್ ಲೋಪೆಜ್ ವಿರುದ್ಧ ೫-೦ ಅಂಕಗಳ ಸುಲಭ ಗೆಲುವು ಸಾಧಿಸಿ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಚಿನ್ನದ ಪದಕದ ಪಂದ್ಯವು ತಾ.೭ ರಂದು (ಇಂದು) ರಾತ್ರಿ ೯.೪೫ ರ ನಂತರ ನಡೆಯಲಿದೆ. ಅಮೇರಿಕಾದ ಸಾರ ಅವರ ವಿರುದ್ಧ ಈ ಅಂತಿಮ ಪಂದ್ಯ ನಡೆಯಲಿದ್ದು, ಚಿನ್ನ ಗೆಲ್ಲುವ ಅವಕಾಶ ಭಾರತಕ್ಕಿದೆ. ಪರಾಭವಗೊಂಡರೆ ಬೆಳ್ಳಿ ದೊರಕಲಿದೆ.