ಕಾಫಿ ಫಸಲು ನಷ್ಟ : ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿಟಿ ಮಂಡಳಿಯಿAದ ಜಿಲ್ಲಾಡಳಿತಕ್ಕೆ ಪತ್ರ ಟಿ ಅಧಿಕ ಮಳೆ ಪ್ರದೇಶಗಳಲ್ಲಿ ಕಾಫಿ ಮಂಡಳಿ ಪರಿಶೀಲನೆ ಟಿ ಆತಂಕದಲ್ಲಿ ಬೆಳೆಗಾರರು
ಮಡಿಕೇರಿ, ಆ. ೬: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಾಫಿ ಫಸಲು ಹಾನಿಗೀಡಾಗುತ್ತಿದೆ. ಮಳೆಯಿಂದ ಆಗುತ್ತಿರುವ ವ್ಯತಿರಿಕ್ತ ಪರಿಣಾಮದ ಬಗ್ಗೆ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದು, ಈಗಾಗಲೇ ಕಾಫಿ ಮಂಡಳಿ ಸೇರಿದಂತೆ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಕಾಫಿ ಫಸಲು ನಷ್ಟದ ಬಗ್ಗೆ ಕಾಫಿ ಮಂಡಳಿಯ ಅಧಿಕಾರಿಗಳು ವಿಜ್ಞಾನಿಗಳು ಹಾಗೂ ತಜ್ಞರ ತಂಡದೊAದಿಗೆ ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ಪ್ರದೇಶಗಳಿಗೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಅಲ್ಲದೆ ಈ ಕುರಿತಾಗಿ ಮಂಡಳಿಯ ಹಿರಿಯ ಅಧಿಕಾರಿಗಳಿಗೂ ವರದಿಯನ್ನು ನೀಡಲಾಗಿದೆ. ಇದರಂತೆ ಕಾಫಿ ಮಂಡಳಿಯ ಸಿಇಓ ಡಾ. ಜಗದೀಶ್ ಅವರು ಕೊಡಗು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ನಷ್ಟದ ಬಗ್ಗೆ ಜಂಟಿ ಪರಿಶೀಲನೆ ನಡೆಸಲು ಮನವಿ ಮಾಡಿದ್ದಾರೆ. ಈಗಲೂ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಇನ್ನೂ ಪ್ರಕ್ರಿಯೆ ಪ್ರಾರಂಭಗೊAಡಿಲ್ಲ. ಜಿಲ್ಲೆಯ ಬೆಳೆಗಾರರು ಬೆಳೆ ನಷ್ಟದ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕೆಂಬ ಬೇಡಿಕೆಯನ್ನು ಈಗಾಗಲೇ ಮುಂದಿಟ್ಟಿದ್ದಾರೆ.
ಪ್ರಸ್ತುತ ಕಾಫಿ ಮಂಡಳಿಯವರು ಮಾತ್ರ ಜಿಲ್ಲೆಯ ಹಲವೆಡೆ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಜತೆಗೆ ಫಸಲ ನಾಶವನ್ನು ತಡೆಯುವ ನಿಟ್ಟಿನಲ್ಲಿ ಬೆಳೆಗಾರರಿಗೆ ಹಲವು ಹತೋಟಿ ಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಪ್ರಯತ್ನ ನಡೆಸಿರುವುದಾಗಿ ಕಾಫಿ ಮಂಡಳಿಯ ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿರುವ ಹುದಿಕೇರಿ, ಶ್ರೀಮಂಗಲ ನಾಪೋಕ್ಲು, ಮಡಿಕೇರಿ, ಭಾಗಮಂಡಲ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿಯ ಕೆಲವಾರು ಗ್ರಾಮಗಳಲ್ಲಿ ಮಂಡಳಿಯ ವಿಜ್ಞಾನಿಗಳು ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಸಲಹೆ ನೀಡಿದ್ದಾರೆ. ಕಾಫಿ ಉದುರುವಿಕೆ, ಕೊಳೆ ರೋಗ, ಬ್ಲಾಕ್ರಾಟ್, ಸ್ಪಾಕ್ರಾಟ್ನಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಮುಂದಿನ ಫಸಲಿನ ಮೇಲೆ ಭಾರೀ ಹೊಡೆತವಾಗಲಿದೆ ಎನ್ನಲಾಗುತ್ತಿದೆ.
ಪ್ರಸ್ತುವ ಜಿಲ್ಲೆಗೆ ಕಾಫಿ ಬೆಳೆಗೆ ವಾಡಿಕೆಯಂತೆ ಅಗತ್ಯವಿರುವ ಮಳೆಗಿಂತ ಶೇ.೨೫ರಷ್ಟು ಮಳೆ ಅಧಿಕವಾಗಿ ಬಿದ್ದಿದೆ ಎಂದು ಅಂದಾಜಿಸಲಾಗಿದೆ. ತಾಲೂಕುವಾರು ಹೋಲಿಕೆ ಮಾಡಿದಲ್ಲಿ ಈಗಾಗಲೇ ಮಡಿಕೇರಿ ತಾಲೂಕಿನಲ್ಲಿ ಶೇ.೩೯, ಸೋಮವಾರಪೇಟೆ ಶೇ.೫೫, ವೀರಾಜಪೇಟೆ ಶೇ.೪೬, ಪೊನ್ನಂಪೇಟೆ ಶೇ.೧೫ರಷ್ಟು ಅಧಿಕ ಮಳೆಯಾಗಿದೆ. ಈ ಹೋಬಳಿಗಳ ವಿವಿಧ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಇದು ಒಂದೆಡೆಯಾದರೆ ಕಳೆದ ವರ್ಷದಲ್ಲಿ ಬಿದ್ದಿದ್ದ ಮಳೆಗೆ ಹೋಲಿಸಿದರೆ ಈ ಬಾರಿ ಪ್ರಮಾಣ ಸರಾಸರಿ ಶೇ.೫೦ಕ್ಕಿಂತ ಅಧಿಕವಿದೆ. ಕಾಫಿಗೆ ಇದೀಗ ಒಂದಷ್ಟು ಬೆಲೆ ಹೆಚ್ಚಿದರೂ ಬೆಳೆಗಾರರಿಗೆ ವರ್ಷಂಪ್ರತಿ ಒಂದಲ್ಲಾ ಒಂದು ಸಮಸ್ಯೆ ನಿರಂತರವಾಗಿ ಎದುರಾಗುತ್ತಲೇ ಇದೆ. ಪ್ರಸಕ್ತ ವರ್ಷ ಬೇಸಿಗೆ ಸಂದರ್ಭದಲ್ಲಿ ಮಳೆ ತೀರಾ ವಿಳಂಬವಾಗಿರುವ ಕಾರಣದಿಂದಾಗಿ ಅಗತ್ಯ ಸಂದರ್ಭದಲ್ಲಿ ಕಾಫಿ ಹೂಮಳೆ ಸಿಗದೆ ಇದು ತೀರಾ ಹೊಡೆತವನ್ನುಂಟು ಮಾಡಿತ್ತು. ಬಹುತೇಕ ಕಡೆಗಳಲ್ಲಿ ಗಿಡಗಳು ಒಣಗಿ ಮೊಗ್ಗು ಕರಕಲಾಗಿತ್ತು. ಇದೀಗ ಮುಂಗಾರಿನ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಳೆಯಾಗಿರುವುದು ಮತ್ತೊಂದು ರೀತಿಯಲ್ಲಿ ದುಷ್ಪರಿಣಾಮವನ್ನುಂಟು ಮಾಡಿದೆ. ಇದರಿಂದಾಗಿ ಮುಂದಿನ ಸಾಲಿನ ಕಾಫಿ ಫಸಲು ಜಿಲ್ಲೆಯಲ್ಲಿ ತೀರಾ ಕಡಿಮೆಯಾಗುವ ಸಾಧ್ಯತೆ ಕಂಡುಬAದಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ತೀರಾ ಕಳವಳದಿಂದಿರುವ ಬೆಳೆಗಾರರು ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.