ಮಡಿಕೇರಿ, ಆ. ೬: ನಾಪೋಕ್ಲು ಇಂದಿರಾನಗರದ ವಿವೇಕಾನಂದ ಸಂಘದಿAದ ಈ ಬಾರಿ ಅದ್ದೂರಿ ಗಣೇಶೋತ್ಸವ ಆಚರಣೆಗೆ ತೀರ್ಮಾನಿಸಲಾಗಿದ್ದು, ಈ ಕುರಿತು ಇತ್ತೀಚೆಗೆ ಸಂಘದ ಸದಸ್ಯರ ಸಮ್ಮುಖದಲ್ಲಿ ನಾಪೋಕ್ಲುವಿನಲ್ಲಿ ಸಭೆ ನಡೆದ ಸಂದರ್ಭ ಕರಪತ್ರ ಬಿಡುಗಡೆ ಮಾಡಲಾಯಿತು.
ಮಾಜಿ ಯೋಧ ಹಾಗೂ ದಾನಿಗಳಾದ ಕೊಂಡೀರ ಗಣೇಶ್, ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಹಾಗೂ ಸದಸ್ಯರು ಹಾಜರಿದ್ದರು. ಸದಸ್ಯ ಜಲೇಂದ್ರ ಅವರು ಸ್ವಾಗತಿಸಿದರು.
ನಾಪೋಕ್ಲು ಇಂದಿರಾನಗರದಲ್ಲಿ ಈ ವರ್ಷ ಸೆಪ್ಟೆಂಬರ್ ೭ ರಂದು ಶನಿವಾರ ಬೆಳಿಗ್ಗೆ ೯.೩೦ ಗಂಟೆಗೆ ಗಣಪತಿ ಹೋಮದೊಂದಿಗೆ ಗೌರಿಗಣೇಶ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು. ನಂತರ ೫ ದಿನಗಳ ಕಾಲ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.