ಮಡಿಕೇರಿ, ಆ. ೫: ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಸಮಯ ಸನ್ನಿಹಿತಗೊಳ್ಳುತ್ತಿದೆ. ಇದಕ್ಕಾಗಿ ವ್ಯವಸ್ಥೆಗಳು ನಡೆಯಬೇಕಾದ ಹೊತ್ತಿನಲ್ಲಿ ಕಳೆದ ವರ್ಷ ತೀರ್ಥೋದ್ಭವದಲ್ಲಿ ಭಕ್ತಾದಿಗಳಿಗಾಗಿ ಕೈಗೊಂಡ ಉಚಿತ ಬಸ್ ಸಂಚಾರದ ಮೊತ್ತ ಪಾವತಿ ವಿಚಾರ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದು, ವಿವಾದವಾಗಿ ಮಾರ್ಪಟ್ಟಿದೆ.

ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಯಮಿತದ ಮಡಿಕೇರಿ ಘಟಕದ ಘಟಕ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಪತ್ರ ಬರೆದು ೧೮-೧೦-೨೦೨೩ ರಂದು ಬೆಳಗ್ಗಿನ ಜಾವ ತಲಕಾವೇರಿ ಕ್ಷೇತ್ರದಲ್ಲಿ ಜರುಗಲಿರುವ ಪವಿತ್ರ ತುಲಾ ಸಂಕ್ರಮಣದ ಪ್ರಯುಕ್ತ ಭಕ್ತಾದಿಗಳ ಅನುಕೂಲಕ್ಕಾಗಿ ೧೭-೧೦-೨೦೨೩ ಹಾಗೂ ೧೮-೧೦-೨೦೨೩ ರಂದು ಎರಡು ದಿನಗಳ ಕಾಲ ಭಾಗಮಂಡಲದಿAದ-ತಲಕಾವೇರಿ ಮತ್ತು ತಲಕಾವೇರಿಯಿಂದ ಭಾಗಮಂಡಲಕ್ಕೆ ಸಂಚರಿಸಲು ಒಟ್ಟು ೧೫ ಕೆ.ಎಸ್.ಆರ್.ಟಿ.ಸಿ. ಸುಸಜ್ಜಿತ ಬಸ್‌ಗಳನ್ನು ಒಪ್ಪಂದ ಮೇರೆಗೆ ಒದಗಿಸಲು ಸೂಚಿಸಿ ಇದಕ್ಕೆ ತಗಲುವ ವೆಚ್ಚವನ್ನು ಜಿಲ್ಲಾಡಳಿತದಿಂದ ಭರಿಸಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದರನ್ವಯ ೧೫ ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ಪುತ್ತೂರು ವಿಭಾಗದಿಂದ ನೀಡಲಾಗಿತ್ತು.

ನಂತರ ಉಚಿತ ಪ್ರಯಾಣದ ಖರ್ಚು-ವೆಚ್ಚದ ಸಂಪೂರ್ಣ ಬಿಲ್ ಅನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಡಿಪೋ ಅಧಿಕಾರಿಗಳು ರವಾನಿಸಿದ್ದರು. ಹಲವು ತಿಂಗಳು ಕಳೆದು ಹಣ ಸಂದಾಯವಾಗದ ಹಿನ್ನೆಲೆ ಜಿಲ್ಲಾಧಿಕಾರಿಗೆ ಪುತ್ತೂರು ವಿಭಾಗದ ಸಂಚಾರಿ ನಿಯಂತ್ರಣಾ ಧಿಕಾರಿ ಪತ್ರ ಬರೆದು ಹಣ ಪಾವತಿಸು ವಂತೆ ಕೋರಿದ್ದಾರೆ. ಜೊತೆಗೆ ರಶೀದಿ, ಸಿಸಿ ಸಹಿತ ಸಂಚಾರದ ಲಾಗ್ ಶೀಟ್ ಅನ್ನು ಒದಗಿಸಿದ್ದಾರೆ. ಆದರೆ, ಸಂದಾಯದ ವಿಚಾರದಲ್ಲಿ ಯಾವುದೇ ಕ್ರಮವಾಗಿರಲಿಲ್ಲ.

ಕಳೆದ ೫-೬ ತಿಂಗಳ ಹಿಂದೆ ಜಿಲ್ಲಾಧಿಕಾರಿಯಿಂದ ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿಗೆ ಪತ್ರ ರವಾನೆಯಾಗಿ ನಿಗದಿತ ಹಣ ವನ್ನು ವ್ಯವಸ್ಥಾಪನ ಸಮಿತಿ ಮೂಲಕ ಭರಿಸುವಂತೆ ಉಲ್ಲೇಖಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ವಿಭಾಗದ ಸಂಚಾರಿ ನಿಯಂತ್ರಣಾ ಧಿಕಾರಿ ಪತ್ರ ಬರೆದು ಹಣ ಪಾವತಿಸು ವಂತೆ ಕೋರಿದ್ದಾರೆ. ಜೊತೆಗೆ ರಶೀದಿ, ಸಿಸಿ ಸಹಿತ ಸಂಚಾರದ ಲಾಗ್ ಶೀಟ್ ಅನ್ನು ಒದಗಿಸಿದ್ದಾರೆ. ಆದರೆ, ಸಂದಾಯದ ವಿಚಾರದಲ್ಲಿ ಯಾವುದೇ ಕ್ರಮವಾಗಿರಲಿಲ್ಲ.

ಕಳೆದ ೫-೬ ತಿಂಗಳ ಹಿಂದೆ ಜಿಲ್ಲಾಧಿಕಾರಿಯಿಂದ ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿಗೆ ಪತ್ರ ರವಾನೆಯಾಗಿ ನಿಗದಿತ ಹಣ ವನ್ನು ವ್ಯವಸ್ಥಾಪನ ಸಮಿತಿ ಮೂಲಕ ಭರಿಸುವಂತೆ ಉಲ್ಲೇಖಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

(ಮೊದಲ ಪುಟದಿಂದ)

ರೂ. ೨.೫೨ ಲಕ್ಷ ಪಾವತಿಗೆ ಬಾಕಿ

ಭಕ್ತಾದಿಗಳ ಉಚಿತ ಪ್ರಯಾಣಕ್ಕಾಗಿ ೧೫ ಬಸ್‌ಗಳು ಸಂಚರಿಸಿದ್ದು, ಒಟ್ಟು ರೂ. ೨.೫೨ ಲಕ್ಷ ವೆಚ್ಚ ತಗುಲಿರುವುದಾಗಿ ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಪತ್ರ ಬರೆದು ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಂದಾಯ ಮಾಡುವಂತೆ ಕಳೆದ ಹಲವು ತಿಂಗಳ ಹಿಂದೆಯೇ ಕೋರಿದ್ದಾರೆ.

ಬಸ್‌ಗಳನ್ನು ಒಪ್ಪಂದದ ಮೇರೆಗೆ ನಿಯೋಜನೆ ಮಾಡಲು ಜಿಲ್ಲಾಧಿಕಾರಿಗಳಿಂದಲೇ ಪತ್ರ ಬಂದ ಹಿನ್ನೆಲೆ ಡಿಪೋ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮರುಪತ್ರ ಬರೆದು ಹಣ ಸಂದಾಯ ಮಾಡಲು ಮನವಿ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಜಿಲ್ಲಾಡಳಿತದಿಂದ ಭಾಗಮಂಡಲ-ತಲಕಾವೇರಿ ವ್ಯವಸ್ಥಾಪನ ಸಮಿತಿಗೆ ಪತ್ರ ಹೋಗಿ ಹಣ ಸಂದಾಯ ಮಾಡುವಂತೆ ಸೂಚಿಸಿದೆ. ಈ ಮುನ್ನ ಜಿಲ್ಲಾಡಳಿತ ಈ ವೆಚ್ಚವನ್ನು ಭರಿಸುತ್ತದೆ ಎಂದಿತ್ತು. ಇದೀಗ ಸಮಿತಿಯ ಹೆಗಲಿಗೆ ಹಣ ಭರಿಸುವ ಜವಾಬ್ದಾರಿ ನೀಡಿದ್ದು, ಜನವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಯಾವುದೇ ಗೊಂದಲ ಬೇಡ : ಪೊನ್ನಣ್ಣ

ಭಕ್ತಾದಿಗಳಿಗೆ ಸಹಾಯಕವಾಗಲೆಂದು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆ.ಎಸ್.ಆರ್.ಟಿ.ಸಿ. ಸ್ವಾಯತ್ತ ಸಂಸ್ಥೆಯಾಗಿರುವ ಹಿನ್ನೆಲೆ ಅದಕ್ಕೆ ಹಣ ಭರಿಸಬೇಕಾಗಿದ್ದು ನಿಯಮ. ಅದರಂತೆ ಕಾವೇರಿ ನೀರಾವರಿ ನಿಗಮದಿಂದ ಹಣ ಬಿಡುಗಡೆಗೊಂಡಿದ್ದು ಇದು ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆಯಾಗಿದೆ. ಈ ಪೈಕಿ ಸಾರಿಗೆ ನಿಗಮಕ್ಕೆ ಹಣ ಸಂದಾಯ ಮಾಡಲಾಗಿದೆ. ಆದರೆ ಕೆಲವರು ದೇವಾಲಯ ಭಂಡಾರದ ಹಣವನ್ನು ಬಳಸಿಕೊಳ್ಳಲಾಗಿದೆ ಎಂದು ಮಾಡುತ್ತಿರುವ ಆರೋಪ ಸುಳ್ಳು. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಮುಂದಿನ ತೀರ್ಥೋದ್ಭವ ಸಮಯದಲ್ಲೂ ಉಚಿತ ಬಸ್ ಸೇವೆ ನೀಡಲಾಗುವುದು ಎಂದು ಶಾಸಕ ಎ.ಎಸ್. ಪೊನ್ನಣ್ಣ ವೀಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ.

ಸಮಿತಿಗೆ ಪತ್ರ ಬರೆದಿಲ್ಲ

ಬಸ್ ಒದಗಿಸಲು ಜಿಲ್ಲಾಧಿಕಾರಿ ಸೂಚಿಸಿದ ಹಿನ್ನೆಲೆ ಅವರಿಗೆ ಒಟ್ಟು ಮೊತ್ತ ಪಾವತಿಯನ್ನು ಮಾಡುವಂತೆ ಪತ್ರ ಬರೆಯಲಾಗಿದೆ. ದೇವಾಲಯದ ವ್ಯವಸ್ಥಾಪನ ಸಮಿತಿಗೆ ನಮ್ಮಿಂದ ಪತ್ರ ಹೋಗಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕ ಮೆಹಬೂಬ್ ಅಲಿ ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ಸಚಿವರ ಪ್ರತಿಕ್ರಿಯೆ

ಈ ಮಧ್ಯೆ ಈ ಕುರಿತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಈ ವಿಷಯವನ್ನು ಜಿಲ್ಲೆಯ ಮೂಲದ ಹಿರಿಯ ಪತ್ರಕರ್ತ ಕೆ.ವಿ. ಪರಮೇಶ್ ತಂದಿದ್ದು, ಯಾವುದೇ ಧಾರ್ಮಿಕ ಉತ್ಸವ ಅಥವಾ ಸಮಾರಂಭಗಳಿಗೆ ಉಚಿತವಾಗಿ ಬಸ್ ಓಡಿಸಲು ನಿಯಮದಂತೆ ಅವಕಾಶ ಇಲ್ಲ. ಆದರೆ ಶುಲ್ಕ ಭರಿಸಲು ದೇವಾಲಯ ಸಮಿತಿಗೆ ಆರ್ಥಿಕವಾಗಿ ಕಷ್ಟವಾದಲ್ಲಿ ಸಂಬAಧಿಸಿದ ಮೊತ್ತ ಪಾವತಿಗೆ ಕರ್ನಾಟಕ ಧಾರ್ಮಿಕ ಪರಿಷತ್ ಇವರಿಗೆ ಮನವಿ ಮಾಡಿದರೆ. ಆ ಮೊತ್ತವನ್ನು ಇಲಾಖೆಗೆ ತುಂಬಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಮುಜರಾಯಿ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಸ್ಪಷ್ಟ ಭರವಸೆ ನೀಡಿದ್ದಾರೆ.

ಹಣ ನೀಡಲು ಸಿದ್ಧ

ವ್ಯವಸ್ಥಾಪನ ಸಮಿತಿಯಲ್ಲಿ ಅಗತ್ಯ ಅನುದಾನ ಲಭ್ಯವಿದೆ. ಮೇಲಧಿಕಾರಿಗಳ ಸ್ಪಷ್ಟ ನಿರ್ದೇಶನ ದೊರೆತ್ತಲ್ಲಿ ನಾವೇ ಹಣವನ್ನು ಪಾವತಿಸುತ್ತೇವೆ. ೫-೬ ತಿಂಗಳ ಹಿಂದೆಯೇ ಕೆಎಸ್‌ಆರ್‌ಟಿಸಿ ಡಿಪೋಗೆ ಹಣ ಪಾವತಿಸುವ ವಿಚಾರದಲ್ಲಿ ಜಿಲ್ಲಾಧಿಕಾರಿಯಿಂದ ಸಮಿತಿಗೆ ಪತ್ರ ಬಂದಿದೆ ಎಂದು ವ್ಯವಸ್ಥಾಪನ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ‘ಶಕ್ತಿ’ಗೆ ತಿಳಿಸಿದ್ದಾರೆ.