ವೀರಾಜಪೇಟೆ, ಆ. ೬: ಬಿಟ್ಟಂಗಾಲ ಗ್ರಾಮದ ಕ್ರೆಡೋ ಆಯುರ್ವೇದ ಆಸ್ಪತ್ರೆಯು ಕಕ್ಕಡ ಆಯುರ್ವೇದ ಉಚಿತ ಚಿಕಿತ್ಸಾ ಶಿಬಿರವನ್ನು ತಾ. ೧೧ರಂದು ಆಯೋಜಿಸಿದೆ.
ಶಿಬಿರವು ಕ್ರೆಡೋ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ನಡೆಯಲಿದೆ. ಶಿಬಿರದಲ್ಲಿ ಆಯುರ್ವೇದ ವೈದ್ಯದಲ್ಲಿ ಪರಿಣಿತಿ ಹೊಂದಿರುವ ನುರಿತ ವೈದ್ಯರಿಂದ ಸಮಾಲೋಚನೆ ಪರಿಹಾರಗಳು ಮತ್ತು ಚಿಕಿತ್ಸಾ ಕ್ರಮಗಳ ಮಾರ್ಗದರ್ಶನ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ೬೩೬೬೩೬೧೮೯೯ ಮತ್ತು ೬೩೬೬೩೬೧೯೦೦ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.