ಸಿದ್ದಾಪುರ, ಆ. ೬: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಮನೆ ಸಮೀಪದ ಬರೆಕುಸಿದು ಸಾರ್ವಜನಿಕರ ರಸ್ತೆಗೆ ಹಾನಿಯಾಗಿರುವ ಘಟನೆ ನಡೆದಿದೆ.

ಅರೆಕಾಡು ಗ್ರಾಮದ ನಿವಾಸಿ ಎ. ಪೊನ್ನಪ್ಪ ಎಂಬವರ ಮನೆಯ ಬಳಿ ವಿಪರೀತ ಮಳೆ ಗಾಳಿಗೆ ಸಿಲುಕಿ ಬರೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಕೃಷಿಕರು ಗದ್ದೆಗಳಿಗೆ ತೆರಳುವ ಸಾರ್ವಜನಿಕ ರಸ್ತೆಗೆ ಹಾನಿಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಬರೆ ಕುಸಿಯದಂತೆ ಹಾಗೂ ರಸ್ತೆಗೆ ಹಾನಿಯಾಗದಂತೆ ಈ ಭಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ತಡೆಗೋಡೆಯನ್ನು ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಹೊಸ್ಕೇರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ.